ರೂಪಾಯಿ ಮೌಲ್ಯ ಕುಸಿತದಿಂದ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Update: 2018-09-30 15:49 GMT

ಹೊಸದಿಲ್ಲಿ, ಸೆ.30: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ತೈಲ ಉತ್ಪಾದಿಸುವ ದೇಶಗಳು ಉತ್ಪಾದನೆಯನ್ನು ಕಡಿಮೆಗೊಳಿಸಿದ್ದು ತೈಲ ಬೆಲೆಯೇರಿಕೆಗೆ ಕಾರಣಗಳಲ್ಲೊಂದು ಎಂದು ಅವರು ಇದೇ ಸಂದರ್ಭ ಹೇಳಿದ್ದಾರೆ. ಇದೇ ಸಂದರ್ಭ ನವೀನ್ ಪಟ್ನಾಯಕ್ ರ ಬಿಜೆಡಿ ಪಕ್ಷದ ವಿರುದ್ಧವೂ ಪ್ರಧಾನ್ ವಾಗ್ದಾಳಿ ನಡೆಸಿದರು.

“2014ರಲ್ಲಿ ಒಡಿಶಾ ಸರಕಾರ 3000 ಕೋಟಿ ರೂ. ವಾರ್ಷಿಕ ತೆರಿಗೆಯನ್ನು ತೈಲಗಳ ಮೂಲಕ ಪಡೆಯುತ್ತಿತ್ತು. ಈಗ 7000 ಕೋಟಿ ರೂ.ಗಳನ್ನು ಪಡೆಯುತ್ತಿದೆ. ವ್ಯಾಟ್ ಕಡಿಮೆ ಮಾಡುವುದು ಅವರ ಜವಾಬ್ದಾರಿಯಾಗಿದೆ. ಆದರೆ ಅವರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News