×
Ad

ಅಮೆರಿಕದ ಮೇಲೆ ನಂಬಿಕೆ ಹುಟ್ಟದೆ ನಿಶ್ಶಸ್ತ್ರೀಕರಣವಿಲ್ಲ: ಉ. ಕೊರಿಯ

Update: 2018-09-30 21:34 IST

ವಿಶ್ವಸಂಸ್ಥೆ, ಸೆ. 30: ನಮ್ಮ ದೇಶದ ವಿರುದ್ಧದ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಮುಂದುವರಿಸುವುದಾಗಿ ಹೇಳುವ ಮೂಲಕ, ಕೊರಿಯ ಪರ್ಯಾಯ ದ್ವೀಪದಲ್ಲಿನ ಶಾಂತಿ ಪ್ರಯತ್ನಗಳಿಗೆ ಅಮೆರಿಕ ತಡೆಯೊಡ್ಡುತ್ತಿದೆ ಎಂದು ಉತ್ತರ ಕೊರಿಯದ ವಿದೇಶ ಸಚಿವ ರಿ ಯೊಂಗ್ ಹೊ ಶನಿವಾರ ಆರೋಪಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕೇಂದ್ರದಲ್ಲಿ ನಡೆಯುತ್ತಿರುವ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಅಮೆರಿಕ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಶಾಂತಿ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಅಮೆರಿಕದ ಕ್ರಮಗಳು ವಿಶ್ವಾಸ ನಿರ್ಮಾಣಕ್ಕೆ ವ್ಯತಿರಿಕ್ತವಾಗಿವೆ’’ ಎಂದು ಹೇಳಿದರು.

ಉತ್ತರ ಕೊರಿಯದ ವಿರುದ್ಧದ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಮುಂದುವರಿಸುವಷ್ಟು ಸಮಯ ನನ್ನ ದೇಶ ನಿಶ್ಶಸ್ತ್ರೀಕರಣದಲ್ಲಿ ಭಾಗಿಯಾಗುವ ಯಾವುದೇ ಸಾಧ್ಯತೆಯಿಲ್ಲ ಎಂದು ರಿ ಹೇಳಿದರು.

‘‘ಅಮೆರಿಕದ ಮೇಲೆ ಯಾವುದೇ ನಂಬಿಕೆ ಹುಟ್ಟದೆ, ನಮ್ಮ ರಾಷ್ಟ್ರೀಯ ಭದ್ರತೆಯಲ್ಲಿ ಯಾವುದೇ ಹೊಂದಾಣಿಕ ಇಲ್ಲ. ಇಂಥ ಪರಿಸ್ಥಿತಿಯಲ್ಲಿ, ನಾವು ಏಕಪಕ್ಷೀಯವಾಗಿ ಮೊದಲು ನಿಶ್ಶಸ್ತ್ರೀಕರಣಗೊಳ್ಳುವ ಯಾವುದೇ ಸಾಧ್ಯತೆಯಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News