ಅಡುಗೆ ಅನಿಲ ಬೆಲೆಯೇರಿಕೆ
Update: 2018-09-30 22:18 IST
ಹೊಸದಿಲ್ಲಿ,ಸೆ.30: ಗೃಹಬಳಕೆ ಅಡುಗೆ ಅನಿಲ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 2.89 ರೂ.ಹೆಚ್ಚಿಸಲಾಗಿದ್ದು,ಸೋಮವಾರದಿಂದ ಪ್ರತಿ ಸಿಲಿಂಡರ್ ಬೆಲೆ 502.40 ರೂ.ಆಗಲಿದೆ.
ಇದೇ ವೇಳೆ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 59 ರೂ.ಗಳ ಭಾರೀ ಏರಿಕೆಯನ್ನು ಮಾಡಲಾಗಿದ್ದು,ಅಂತರರಾಷ್ಟ್ರೀಯ ಬೆಲೆಯಲ್ಲಿ ಹೆಚ್ಚಳ ಮತ್ತು ವಿದೇಶಿ ವಿನಿಮಯ ಏರಿಕೆ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಭಾರತೀಯ ತೈಲ ನಿಗಮ(ಐಒಸಿ)ವು ಹೇಳಿಕೆಯಲ್ಲಿ ತಿಳಿಸಿದೆ.
ಗೃಹಬಳಕೆ ಎಲ್‌ಪಿಜಿ ಗ್ರಾಹಕರಿಗೆ ಮುಖ್ಯವಾಗಿ ಜಿಎಸ್‌ಟಿಯಿಂದಾಗಿ ಕೇವಲ 2.89 ರೂ.ಏರಿಕೆಯಾಗಿದೆ ಎಂದು ಅದು ಹೇಳಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ವರ್ಗಾವಣೆ ಮೊತ್ತವನ್ನು ಸೆಪ್ಟೆಂಬರ್‌ನಲ್ಲಿದ್ದ 320.49 ರೂ.ಗಳಿಂದ ಅಕ್ಟೋಬರ್ ತಿಂಗಳಿಗೆ 376.60 ರೂ.ಗೆ ಹೆಚ್ಚಿಸಲಾಗಿದೆ. ತನ್ಮೂಲಕ ಸಬ್ಸಿಡಿಯುಕ್ತ ಗೃಹಬಳಕೆ ಎಲ್‌ಪಿಜಿ ಗ್ರಾಹಕರಿಗೆ ಬೆಲೆಏರಿಕೆಯ ವಿರುದ್ಧ ರಕ್ಷಣೆಯನ್ನು ಒದಗಿಸಲಾಗಿದೆ ಎಂದೂ ಅದು ತಿಳಿಸಿದೆ.