ಬಿಎಸ್‌ಎಫ್‌ ಯೋಧನಿಂದ ಸಹೋದ್ಯೋಗಿಯ ಗುಂಡಿಕ್ಕಿ ಹತ್ಯೆ

Update: 2018-10-01 14:44 GMT

ಘಾಜಿಯಾಬಾದ್,ಅ.1: ಇಲ್ಲಿಯ ಲಿಂಕ್ ರೋಡ್ ಪ್ರದೇಶದಲ್ಲಿರುವ ಬಿಎಸ್‌ಎಫ್‌ನ ಹಂಗಾಮಿ ಶಿಬಿರದಲ್ಲಿ ಸೋಮವಾರ ಬೆಳಿಗ್ಗೆ ಯೋಧನೋರ್ವ ತನ್ನ ಸಹೋದ್ಯೋಗಿಯನ್ನು ಗುಂಡಿಟ್ಟು ಹತ್ಯೆಗೈದಿದ್ದಾನೆ.

 ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಕಾನಸ್ಟೇಬಲ್ ಅಜಿತ್ ತನ್ನದೇ ಬ್ಯಾಚ್‌ಮೇಟ್ ಆಗಿದ್ದ ಜಗಪ್ರೀತ್ ಮೇಲೆ ಇನ್ಸಾಸ್ ರೈಫಲ್‌ನಿಂದ ಗುಂಡು ಹಾರಿಸಿದ್ದು,ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾನೆ.

 2012ರಲ್ಲಿ ಬಿಎಸ್‌ಎಫ್‌ಗೆ ಸೇರಿದ್ದ ಇಬ್ಬರೂ ಗುರುಗಾಂವ್‌ನ 95ನೇ ಬಿಎಸ್‌ಎಫ್ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಘಾಜಿಯಾಬಾದ್‌ನಲ್ಲಿ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯದಲ್ಲಿ ನೆರವಾಗಲು ನಿಯೋಜಿತ ತುಕಡಿಯ ಭಾಗವಾಗಿದ್ದರು.

ಉಭಯತರ ನಡುವಿನ ವಾದ ಈ ಹತ್ಯೆಗೆ ಕಾರಣವಾರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News