ಕೇಂದ್ರ ಸರಕಾರದ ಭರವಸೆ ನಿರಾಕರಿಸಿದ ರೈತರು

Update: 2018-10-02 15:48 GMT

ಹೊಸದಿಲ್ಲಿ ಅ. 2:  ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆ ಪರಿಶೀಲಿಸಲು ಕೇಂದ್ರ ಸರಕಾರ ಮಂಗಳವಾರ ಒಪ್ಪಿಕೊಂಡಿದೆ. ಆದರೆ, ಕೇಂದ್ರ ಭರವಸೆಯನ್ನು ಒಪ್ಪಿಕೊಳ್ಳಲು ಪ್ರತಿಭಟನಕಾರರು ನಿರಾಕರಿಸಿದ್ದಾರೆ.

ರೈತರು ಕೇಂದ್ರ ಸರಕಾರದ ಭರವಸೆ ಒಪ್ಪಿಕೊಳ್ಳಲಾರರು. ಅವರು ಪ್ರತಿಭಟನೆ ಮುಂದುವರಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ನರೇಶ್ ಟಿಕಾಯತ್ ತಿಳಿಸಿದ್ದಾರೆ. ‘‘ನಾವು 11 ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ, ನಮ್ಮ 7 ಬೇಡಿಕೆಗಳ ಮಾತ್ರ ಈಡೇರಿಸುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ. ಆದಾಗ್ಯೂ, 4 ಬೇಡಿಕೆಗಳ ಬಗ್ಗೆ ಇನ್ನೊಮ್ಮೆ ಸಭೆ ನಡೆಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ’’ ಎಂದು ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ಯುದ್ವಿರ್ ಸಿಂಗ್ ತಿಳಿಸಿದ್ದಾರೆ.

ಸಿ2 ಪ್ಲಸ್ 50 ವಿಷಯದ ಕುರಿತ ನಿಲುವು ಹಾಗೂ ಸಾಲ ಮನ್ನಾದ ಪ್ರಧಾನ ವಿವಾದವ ಬಗ್ಗೆವ ಕೇಂದ್ರ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಅವರು ಹೇಳಿದ್ದಾರೆ. ಸಮಗ್ರ ವೆಚ್ಚದ (ಸಿ2 ವೆಚ್ಚ)ದ ಶೇ. 50 ಬೆಂಬಲ ಬೆಲೆಯನ್ನು ಎಂ.ಎಸ್. ಸ್ವಾಮಿನಾಥನ್ ಶಿಫಾರಸು ಮಾಡಿದ್ದರು.

ರಾಜನಾಥ್ ಸಿಂಗ್ ಸಭೆ ಈ ಹಿಂದೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ದಿಲ್ಲಿ ಹಾಗೂ ಉತ್ತರಪ್ರದೇಶದ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಮಾತುಕತೆ ನಡೆಸಿದ್ದರು ಹಾಗೂ ಅವರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಇದು ಪೂರ್ವಾಹ್ನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರೈತರ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಅವರನ್ನು ಸಮಾಧಾನಗೊಳಿಸುವುದು ಹೇಗೆ ಎಂಬ ಬಗ್ಗೆ ಕೇಂದ್ರ ಕೃಷಿ ಸಚಿವೆ ರಾಧಾ ಮೋಹನ್ ಸಿಂಗ್ ಹಾಗೂ ಇತರರ ಜೊತೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಬಿಕೆಯು ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.

ನಮ್ಮ ರ್ಯಾಲಿಯನ್ನು ಇಲ್ಲಿ (ಉ.ಪ್ರ.-ದಿಲ್ಲಿ ಗಡಿ) ಯಾಕೆ ನಿಲ್ಲಿಸಿದಿರಿ?, ರ್ಯಾಲಿ ಶಿಸ್ತಿನಿಂದ ಮುಂದುವರಿಯುತ್ತಿತ್ತು. ನಾವು ನಮ್ಮ ಸಮಸ್ಯೆಗಳನ್ನು ಸರಕಾರದ ಬಳಿ ಹೇಳದೆ ಯಾರಲ್ಲಿ ಹೇಳಬೇಕು ?, ನಾವು ಸಮಸ್ಯೆ ಹೇಳಲು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕೇ ?,

ನರೇಶ್ ಟಿಕಾಯತ್, ಭಾರತೀಯ ಕಿಸಾನ್ ಅಧ್ಯಕ್ಷ

ಅವರಿಗೆ ದಿಲ್ಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಯಾಕೆ ?, ಇದು ತಪ್ಪು. ರೈತರೊಂದಿಗೆ ನಾವಿದ್ದೇವೆ.

ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ.

‘‘ಮಹಾತ್ಮಾ ಗಾಂಧಿ ಅವರ ಜನ್ಮ ದಿನವಾದ ಇಂದು ಮೋದಿ ಸರಕಾರ ಕೈಗೊಂಡ ಕ್ರಮ ಸ್ವಾತಂತ್ರ ಪೂರ್ವದ ಭಾರತದ ಬ್ರಿಟಿಶ್ ಸರಕಾರಕ್ಕಿಂತ ಭಿನ್ನ ಅಲ್ಲ ಎಂದು ತೋರಿಸಿಕೊಟ್ಟಿದೆ. ಬ್ರಿಟಿಶ್ ಸರಕಾರ ಹಿಂದೆ ರೈತರ ಮೇಲೆ ದೌರ್ಜನ್ಯ ಎಸಗಿತ್ತು. ಇಂದು ಮೋದಿ ಸರಕಾರ ರೈತರ ಮೇಲೆ ಅಶ್ರುವಾಯು ಸೆಲ್‌ಗಳನ್ನು ಸಿಡಿಸಿತು’’ ಎಂದು ಅವರು ಹೇಳಿದ್ದಾರೆ.

ರಣದೀಪ್ ಎಸ್. ಸುರ್ಜೇವಾಲ, ಕಾಂಗ್ರೆಸ್ ನಾಯಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News