ಬಾಲಕಿಯ ಮೇಲೆ ಇಬ್ಬರು ಅರ್ಚಕರಿಂದ ಅತ್ಯಾಚಾರ
Update: 2018-10-03 22:09 IST
ಭೋಪಾಲ, ಅ. 3: ಡಾಟಿಯಾ ಜಿಲ್ಲೆಯ ದೇವಾಲಯದ ಆವರಣದ ಒಳಗಡೆ 5 ವರ್ಷದ ಬಾಲಕಿಯ ಮೇಲೆ ಇಬ್ಬರು ಅರ್ಚಕರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ರಾಜು ಪಂಡಿತ್ (55) ಹಾಗೂ ಬಾಟೋಲಿ ಪ್ರಜಾಪತಿ (45) ಎಂಬವರನ್ನು ಬಂಧಿಸಲಾಗಿದೆ. ರೈತರೊಬ್ಬರ ಪುತ್ರಿಯಾಗಿರುವ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಸ್ಥಿರವಾಗಿದೆ. ಸಿಹಿ ತಿಂಡಿ ತೋರಿಸಿ ಬಾಲಕಿಯನ್ನು ದೇವಾಲಯಕ್ಕೆ ಒಳಗೆ ಕರೆದೊಯ್ದ ಇಬ್ಬರು ಅರ್ಚಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅನಂತರ ಬಾಲಕಿಯನ್ನು ಮನೆಯ ಹೊರಗೆ ತಂದು ಬಿಟ್ಟಿದ್ದಾರೆ. ಅಲ್ಲದೆ ನಡೆದ ಘಟನೆಯನ್ನು ಬಹಿರಂಗಪಡಿಸದಂತೆ ಬಾಲಕಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಗೋರಾಘಾಟ್ ಪೊಲೀಸ್ ಠಾಣೆಯ ಟೌನ್ ಇನ್ಸ್‌ಪೆಕ್ಟರ್ ರಿಪುದಾಮನ್ ಸಿಂಗ್ ಹೇಳಿದ್ದಾರೆ.