ರಾಜ್ಯದ ಒಗ್ಗಟ್ಟನ್ನು ಒಡೆಯಲು ನಡೆಯುತ್ತಿರುವ ‘ಉದ್ದೇಶಪೂರ್ವಕ’ ಪ್ರಯತ್ನ: ಪಿಣರಾಯಿ ವಿಜಯನ್

Update: 2018-10-08 12:57 GMT

ತಿರುವನಂತಪುರಂ, ಅ.8: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ಮುಂದಾದ ಕೇರಳ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಕೇರಳ ಸಿಎಂ ಪಿಣರಾಯಿ ವಿಜಯನ್, ರಾಜ್ಯದ ಒಗ್ಗಟ್ಟು ಮತ್ತು ಜಾತ್ಯಾತೀತತೆಯನ್ನು ನಾಶಪಡಿಸಲು ನಡೆಯುತ್ತಿರುವ ಉದ್ದೇಶಪೂರ್ವಕ ಪ್ರಯತ್ನ ಎಂದಿದ್ದಾರೆ.

ವಿವಿಧ ಧರ್ಮಗಳ ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ರಕ್ಷಿಸಲು, ಆಚರಣಾ ಕೇಂದ್ರಗಳನ್ನು ರಕ್ಷಿಸಲು ಸರಕಾರವು ಬದ್ಧವಾಗಿದೆ ಎಂದ ಅವರು,’ರಾಜಕೀಯ ಪ್ರೇರಿತ’ ಪ್ರಯತ್ನಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದರು.

“ಭೀಕರ ಪ್ರವಾಹವನ್ನು ಕೇರಳದ ಜನತೆ ಒಗ್ಗಟ್ಟಾಗಿ ಎದುರಿಸಿದ್ದರು. ಆದರೆ ಇದೀಗ ಒಗ್ಗಟ್ಟನ್ನು ಒಡೆಯಲು ಪ್ರಯತ್ನಗಳು ನಡೆಯುತ್ತಿವೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News