ಲೈಂಗಿಕ ದೌರ್ಜನ್ಯ ಆರೋಪ: ಎಐಬಿಯಿಂದ ಹೊರನಡೆದ ತನ್ಮಯ್ ಭಟ್
Update: 2018-10-08 20:17 IST
ಹೊಸದಿಲ್ಲಿ, ಅ.8: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಾಮಿಡಿಯನ್ ತನ್ಮಯ್ ಭಟ್ ಎಐಬಿ ಹಾಸ್ಯ ತಂಡದಿಂದ ಹೊರನಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎಐಬಿ ಮತ್ತು ಅದರ ಸಹಸ್ಥಾಪಕ ಮತ್ತು ಸಿಇಒ ತನ್ಮಯ್ ಭಟ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗುತ್ತಿರುವ ಆರೋಪಗಳನ್ನು ತಂಡ ಗಮನಿಸುತ್ತಿದೆ. ಈ ಪ್ರಕರಣಗಳಲ್ಲಿ ತನ್ಮಯ್ ಪಾತ್ರದ ಬಗ್ಗೆ ನಿರ್ಲಕ್ಷವಹಿಸಲು ಸಾಧ್ಯವಿಲ್ಲ ಎಂದು ಎಐಬಿ ತಿಳಿಸಿದೆ. ತಂಡದ ಓರ್ವ ಪ್ರಮುಖ ಕಾಮಿಡಿಯನ್ ಆಗಿರುವ ತನ್ಮಯ್ ಭಟ್ ಇನ್ನು ಮುಂದೆ ತಂಡದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಐಬಿ ಸ್ಪಷ್ಟಪಡಿಸಿದೆ.