ಏರ್ ಇಂಡಿಯಾಗೆ ಇಂಧನ ಪೂರೈಕೆ ಸ್ಥಗಿತಗೊಳಿಸಿದ ತೈಲ ಕಂಪೆನಿಗಳು

Update: 2018-10-08 17:14 GMT

ಹೊಸದಿಲ್ಲಿ, ಅ.8: ಇನ್ನೂ ಪಾವತಿಯಾಗದ ಬಾಕಿ ಮೊತ್ತದ ಕಾರಣದಿಂದ ತೈಲ ಮಾರ್ಕೆಟಿಂಗ್ ಕಂಪೆನಿಗಳು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಗೆ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮೊಹಾಲಿ, ಪಾಟ್ನಾ, ಪುಣೆ, ತಿರುವನಂತಪುರಂ, ಲಖ್ನೋ, ವಿಶಾಪಟ್ಟಣ, ಕೊಯಂಬತ್ತೂರು ಮತ್ತು ಜೈಪುರ, ಹೀಗೆ ದೇಶದ ಎಂಟು ಕಡೆಗಳಲ್ಲಿ ಏರ್ ಇಂಡಿಯಾದ ದೇಶೀಯ ವಿಮಾನಗಳಿಗೆ ತೈಲ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ನಿರ್ಧಾರವನ್ನು ಸೋಮವಾರದಿಂದಲೇ ಜಾರಿಗೆ ತರಲಾಗಿದೆ ಎಂದು ತಿಳಿಸಲಾಗಿದೆ.

ಏರ್ ಇಂಡಿಯಾವು ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ 5000 ಕೋಟಿ ರೂ. ಬಾಕಿಯುಳಿಸಿದ್ದು ಪ್ರತಿದಿನ 20 ಕೋಟಿ ರೂ.ನಂತೆ ಪಾವತಿಸುತ್ತಿದೆ. ಈ ದೈನಂದಿನ ಪಾವತಿಯೂ ನಿಯಮಿತವಾಗಿರದೆ ಇರುವುದರಿಂದ ತೈಲ ಮಾರುಕಟ್ಟೆ ಕಂಪೆನಿಗಳು ಇಂಧನ ಪೂರೈಕೆಯನ್ನೇ ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ. ಈ ಮಧ್ಯೆ 2000 ಕೋಟಿ ರೂ. ಬಂಡವಾಳ ಹೂಡಿಕೆಗೆ ಏರ್ ಇಂಡಿಯಾ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News