ಪ್ರೊ ಕಬಡ್ಡಿ: ಪುಣೇರಿಗೆ ಭರ್ಜರಿ ಜಯ

Update: 2018-10-08 18:21 GMT

ಚೆನ್ನೈ, ಅ.8: ಆಲ್‌ರೌಂಡ್ ಪ್ರದರ್ಶನ ನೀಡಿದ ಪುಣೇರಿ ಪಲ್ಟನ್ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು 34-22 ಅಂಕಗಳಿಂದ ಸೋಲಿಸಿದೆ. ಈ ಮೂಲಕ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೊದಲ ಗೆಲುವು ದಾಖಲಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ನಿತಿನ್ ಥೋಮರ್ 7 ಅಂಕ ಗಳಿಸಿ ತಂಡದ ಯಶಸ್ವಿ ಆಟಗಾರ ಎನಿಸಿಕೊಂಡರೆ, ಜಿಬಿ ಮೋರೆ ಹಾಗೂ ದೀಪಕ್ ಕುಮಾರ್ ಕ್ರಮವಾಗಿ 6 ಹಾಗೂ 5 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಹರ್ಯಾಣದ ಪರ ವಿಕಾಸ್ ಕಾಂಡೊಲಾ(8 ಅಂಕ)ಹೊರತುಪಡಿಸಿ ಉಳಿದ ಆಟಗಾರರು ನಿರಾಸೆಗೊಳಿಸಿದರು.

 ಇದೇ ವೇಳೆ, ಯುಪಿ ಯೋಧಾಸ್ ತಂಡ ತಮಿಳ್ ತಲೈವಾಸ್ ತಂಡವನ್ನು ಅದರದೇ ನೆಲದಲ್ಲಿ 37-32 ಅಂತರದಿಂದ ಮಣಿಸಿ ಶಾಕ್ ನೀಡಿದೆ. ಮೊದಲಾರ್ಧದಲ್ಲಿ 18-4 ಮುನ್ನಡೆ ಪಡೆದ ಯೋಧಾಸ್ ತಂಡ ಪ್ರಾಬಲ್ಯ ಮರೆದಿತ್ತು. ಕೊನೆಯಲ್ಲಿ ತಮಿಳ್ ತಂಡ ತಿರುಗೇಟು ನೀಡಲು ಯತ್ನಿಸಿದರೂ 5 ಅಂಕಗಳಿಂದ ಸೋಲುಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News