ಮೊದಲ ಟೆಸ್ಟ್‌ : ಪಾಕಿಸ್ತಾನ ಮೊದಲ ಇನಿಂಗ್ಸ್‌ 482/10

Update: 2018-10-08 18:25 GMT

ದುಬೈ, ಅ.8: ಆಸ್ಟ್ರೇಲಿಯ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನ 482 ರನ್‌ಗಳಿಗೆ ಆಲೌಟಾಗಿದೆ.

ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್ ನ ಎರಡನೇ ದಿನವಾದ ಸೋಮವಾರ ಪಾಕಿಸ್ತಾನದ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ ಆಸ್ಟ್ರೇಲಿಯ ದಿನದಾಟದಂತ್ಯಕ್ಕೆ 13 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಉಸ್ಮಾನ್ ಖ್ವಾಜಾ 17 ರನ್ ಮತ್ತು ಆ್ಯರೊನ್ ಫಿಂಚ್ 13 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 255 ರನ್ ಗಳಿಸಿದ್ದ ಪಾಕಿಸ್ತಾನ ಸೋಮವಾರ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 227 ರನ್ ಸೇರಿಸಿತು. 15 ರನ್ ಗಳಿಸಿದ್ದ ಹಾರೀಸ್ ಸೊಹೈಲ್ ಆಟ ಮುಂದುವರಿಸಿ ಶತಕ ದಾಖಲಿಸಿದರು. ಆದರೆ ಮುಹಮ್ಮದ್ ಅಬ್ಬಾಸ್ (1) ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೆ ನಿರ್ಗಮಿಸಿದರು. ಹಾರೀಸ್ ಮತ್ತು ಅಸದ್ ಶಫೀಕ್ 5ನೇ ವಿಕೆಟ್‌ಗೆ 150 ರನ್‌ಗಳ ಜೊತೆಯಾಟ ನೀಡಿದರು. ಶಫೀಕ್ (80) ಅವರು 12ನೇ ಶತಕ ದಾಖಲಿಸುವ ಅವಕಾಶ ವಂಚಿತಗೊಂಡರು. ಹಾರೀಸ್ ತನ್ನ 6ನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಅವರು 110 ರನ್ ಗಳಿಸಿ ಔಟಾದರು. ನಾಯಕ ಹಾಗೂ ವಿಕೆಟ್ ಕೀಪರ್ ಸರ್ಫರಾಝ್ ಅಹ್ಮದ್(15), ಬಿಲಾಲ್ ಆಸಿಫ್(12), ವಹಾಬ್ ರಿಯಾಝ್(ಔಟಾಗದೆ 7), ಬಾಬರ್ ಅಝಮ್ 4 ರನ್ , ಯಾಸೀರ್ ಶಾ 3 ರನ್ ಗಳಿಸಿದರು.

 ಆಸ್ಟ್ರೇಲಿಯದ ಪೀಟರ್ ಸಿಡ್ಲ್ 58ಕ್ಕೆ 3, ನಥಾನ್ ಲಿಯೊನ್ 114ಕ್ಕೆ 2, ಮಿಚೆಲ್ ಸ್ಟಾರ್ಕ್, ಜೋನ್ ಹೊಲ್ಯಾಂಡ್ ಮತ್ತು ಮಾರ್ನುಸ್ ಮಬುಸ್‌ಚಾಗ್ನೆ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News