ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

Update: 2018-10-09 15:04 GMT

ಮುಂಬೈ, ಅ. 9: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮಂಗಳವಾರ ಮತ್ತೆ ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಉಂಟಾದ ತೊಂದರೆ ನಿವಾರಿಸಲು ಮೋದಿ ನೇತೃತ್ವದ ಕೇಂದ್ರ ಸರಕಾರ ಈ ತಿಂಗಳ ಆರಂಭದಲ್ಲಿ ತೈಲ ಬೆಲೆಯಲ್ಲಿ ಲೀಟರ್‌ಗೆ 2.50 ರೂ. ಇಳಿಕೆ ಮಾಡಿತ್ತು. ತೈಲ ಬೆಲೆ ನಿಯಂತ್ರಣಕ್ಕೆ ಸರಕಾರದ ಪ್ರಯತ್ನದ ಹೊರತಾಗಿಯೂ ದಿನನಿತ್ಯ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹಾಗೂ ಅಮೆರಿಕ ಡಾಲರ್ ಎದುರು ರೂಪಾಯಿ ವೌಲ್ಯ ಕುಸಿಯುತ್ತಿರುವುದನ್ನು ಪರಿಗಣಿಸಿ ದಿನನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. ಮಂಗಳವಾರ ಪೆಟ್ರೋಲ್ ಬೆಲೆ ಚಿಲ್ಲರೆಯಾಗಿ ದಿಲ್ಲಿಯಲ್ಲಿ ಲೀಟರ್‌ಗೆ 0.23 ರೂ. ಏರಿಕೆಯಾಗಿದ್ದು, 82.26 ಆಗಿದೆ. ಡೀಸೆಲ್ ಬೆಲೆ ಚಿಲ್ಲೆರೆಯಾಗಿ ಲೀಟರ್‌ಗೆ 0.29 ಏರಿಕೆಯಾಗಿದ್ದು, 74.11 ಆಗಿದೆ. ಮುಂಬೈಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 0.23 ರೂ. ಏರಿಕೆಯಾಗಿದ್ದು, 87.73 ರೂ. ಆಗಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ 0.31 ರೂ. ಏರಿಕೆಯಾಗಿದ್ದು, 77.68 ರೂ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News