2019-20 ವಿತ್ತ ವರ್ಷದಲ್ಲಿ ಭಾರತದ ಜಿಡಿಪಿ ಶೇ. 7.5 ಹೆಚ್ಚಳ: ಐಎಂಎಫ್ ಭವಿಷ್ಯ

Update: 2018-10-09 15:37 GMT

ಹೊಸದಿಲ್ಲಿ, ಅ. 9: ಹೂಡಿಕೆ ಹಾಗೂ ಖಾಸಗಿ ಖರೀದಿಯ ಭಾರೀ ಹೆಚ್ಚಳದಿಂದ ಭಾರತದ ಜಿಡಿಪಿ 2018-19ರಲ್ಲಿ ಶೇ. 7.3 ಹಾಗೂ 2019-20ರಲ್ಲಿ ಶೇ. 7.5 ಏರಿಕೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ತನ್ನ ಇತ್ತೀಚೆಗಿನ ವರದಿಯಲ್ಲಿ ಹೇಳಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮಂಗಳವಾರ ಪ್ರಕಟಿಸಿದ ತನ್ನ ವರದಿಯಲ್ಲಿ, ವಿಶಾಲಾರ್ಥ ಅರ್ಥಶಾಸ್ತ್ರದ ಮೂಲಕ ಭಾರತದ ಸದ್ಯೋಭವಿಷ್ಯ ಪರಿಶೀಲಿಸಿದಾಗ ಅನುಕೂಲಕರವಾಗಿ ಕಂಡು ಬರುತ್ತಿದೆ ಎಂದಿದೆ. ಹೂಡಿಕೆ ಹಾಗೂ ಖಾಸಗಿ ಖರೀದಿಯ ಭಾರೀ ಹೆಚ್ಚಳದಿಂದ ಭಾರತದ ಬೆಳವಣಿಗೆ ದರ 2018-19ರಲ್ಲಿ ಶೇ. 7.3 ಆಗಲಿದೆ ಹಾಗೂ 2019-20ರಲ್ಲಿ ಶೇ. 7.5 ಆಗಲಿದೆ ಎಂದು ಅದು ಹೇಳಿದೆ. ಈ ಬೆಳವಣಿಗೆ ಒಂದು ವೇಳೆ ಸತ್ಯವಾದರೆ, ಭಾರತ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುವ ಆರ್ಥಿಕತೆ ಎಂಬ ಹಣೆ ಪಟ್ಟಿ ಹೊಂದಲಿದೆ. ಅಲ್ಲದೆ ಚೀನವನ್ನು ಮೀರಿಸಲಿದೆ. ಚೀನಾದ ಬೆಳವಣಿಗೆ ದರ 2018ರಲ್ಲಿ ಶೇ. 0.7ಕ್ಕಿಂತ ಹೆಚ್ಚು ಹಾಗೂ 2019ರಲ್ಲಿ ಶೇ. 1.2 ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News