ಬುಡಕಟ್ಟು ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಹೆಣಗಾಡುತ್ತಿರುವ ಕೇಂದ್ರ ಸರಕಾರ

Update: 2018-10-09 17:07 GMT

ಹೊಸದಿಲ್ಲಿ, ಅ.9: ಗಣನೀಯ ಸಂಖ್ಯೆಯ ಪರಿಶಿಷ್ಟ ಪಂಗಡದ ಕುಟುಂಬಗಳು ಸಾಮುದಾಯಿಕವಾಗಿ ವಾಸಿಸುತ್ತಿಲ್ಲವಾದ ಕಾರಣ ಬುಡಕಟ್ಟು ಪ್ರದೇಶಗಳಲ್ಲಿ ಅವರಿಗೆ ನೀರು ಪೂರೈಕೆ ಹಾಗೂ ವಿದ್ಯುತ್ ಸಂಪರ್ಕದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರಕ್ಕೆ ತೊಂದರೆಗಳನ್ನು ಎದುರಿಸುತ್ತಿದೆಯೆಂದು ಬುಡಕಟ್ಟು ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಡಕಟ್ಟು ಮಕ್ಕಳಿಗಾಗಿನ ಹಲವಾರು ಶಾಲೆಗಳಿಗೆ ನಳ್ಳಿನೀರಿನ ಸಂಪರ್ಕವನ್ನು ಒದಗಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲವೆಂಬುದನ್ನು ಕೂಡಾ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಸಾಧ್ಯವಿದ್ದ ಸ್ಥಳಗಳಲ್ಲೆಲ್ಲಾ ಸರಕಾರವು ಸಬ್‌ಮರ್ಸಿಬಲ್ ಪಂಪ್‌ಗಳು ಅಥವಾ ಕೊಳವೆಬಾವಿಗಳನ್ನು ಸ್ಥಾಪಿಸಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.

 20-25 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿದ್ದ ಬುಡಕಟ್ಟು ಶಾಲೆಗಳಲ್ಲಿ, ಶೌಚಾಲಯಗಳನ್ನು ನಿರ್ಮಿಸುವ ಕಲ್ಪನೆಯೇ ಇರಲಿಲ್ಲ. ಬುಡಕಟ್ಟು ವಿದ್ಯಾರ್ಥಿನಿಯರ ವಸತಿಗೃಹಗಳನ್ನು ಸ್ಥಾಪಿಸಲಾಗಿದ್ದರೂ, ಅವುಗಳಿಗೆ ನೀರು ಪೂರೈಕೆಯ ವ್ಯವಸ್ಥೆಗೆ ಆನಂತರವಷ್ಟೇ ಅನುಮೋದನೆ ನೀಡಲಾಗಿದೆ. ಹಲವಾರು ಸ್ಥಳಗಳಲ್ಲಿ ನೀರಿನ ಸಂಪರ್ಕವನ್ನು ಕೂಡಾ ಒದಗಿಸಲಾಗಿಲ್ಲವೆಂದು ಅವರು ತಿಳಿಸಿದ್ದಾರೆ.

  ಬುಡಕಟ್ಟು ಜನರು ವಿಸ್ತೃತವಾದ ಪ್ರದೇಶದುದ್ದಕ್ಕೂ ವ್ಯಾಪಿಸಿದ್ದಾರೆ. ಅಕ್ಕಪಕ್ಕದಲ್ಲಿ ವಾಸಿಸುವ ಪರಿಕಲ್ಪನೆ ಅವರಲ್ಲಿಲ್ಲ. ಪರಿಶಿಷ್ಟ ಪಂಗಡಗಳ ಕುಟುಂಬಗಳು ಮನೆಗಳನ್ನು ನಿರ್ಮಿಸುವ ಅವರ ಮನೆಯು, ಪರಸ್ಪರ ಸುಮಾರು 100 ಮೀಟರ್ ಅಂತರದಲ್ಲಿರುತ್ತದೆ.

ಆದುದರಿಂದ ಸಾಂಪ್ರದಾಯಿಕ ಬುಡಕಟ್ಟು ವಸತಿಪ್ರದೇಶಗಳಿಗೆ ನೀರು ಹಾಗೂ ವಿದ್ಯುತ್ ಪೂರೈಕೆಯನ್ನು ಒದಗಿಸುವುದು ಹಾಗೂ ರಸ್ತೆ ಸೌಕರ್ಯವನ್ನು ನಿರ್ಮಿಸುವುದು ತುಂಬಾ ಕಷ್ಟಕರವಾಗುತ್ತಿದೆಯೆಂದು ಅಧಿಕಾರಿ ಹೇಳಿದ್ದಾರೆ.

ಬುಡಕಟ್ಟು ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡಲ್ಲಿ ಮಾತ್ರ ಸರಕಾರವು ಅವರಿಗೆ ಸೇವೆಗಳನ್ನು ಒದಗಿಸಲು ಶಕ್ತವಾಗಲಿದೆಯೆಂದು ಅಧಿಕಾರಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News