‘ಮಿ ಟೂ’ನಲ್ಲಿ ಮಾನಸಿಕ ಕಿರುಕುಳ ಬಿಚ್ಚಿಟ್ಟ ಜ್ವಾಲಾ ಗುಟ್ಟಾ

Update: 2018-10-09 17:24 GMT

ಹೈದರಾಬಾದ್,ಅ.9: ದೇಶದಲ್ಲಿ ಹೊಸ ಸಂಚಲನ ಮೂಡಿಸಿರುವ ‘ಮಿ ಟೂ’ ಚಳುವಳಿಗೆ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಮಂಗಳವಾರ ಸೇರ್ಪಡೆಯಾಗಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಜ್ವಾಲಾ, ತಾನು ಸ್ಥಿರ ಪ್ರದರ್ಶನ ನೀಡಿದ್ದರೂ ರಾಷ್ಟ್ರೀಯ ಆಯ್ಕೆ ಸಮಿತಿ ತಾರತಮ್ಯ ನೀತಿ ಅನುಸರಿಸಿತ್ತು. ಇದು ನಾನು ಕ್ರೀಡೆಯಿಂದ ಬೇಗನೆ ನಿವೃತ್ತಿಯಾಗಲು ಕಾರಣವಾಗಿದೆ ಎಂದರು.

  ‘‘ನಾನು ‘ಮಿ ಟೂ’ವಿನ ಮೂಲಕ ತನಗಾದ ಮಾನಸಿಕ ಕಿರುಕುಳದ ಬಗ್ಗೆ ಮಾತನಾಡಬೇಕಾಗಿದೆ. 2006ರಿಂದ ಈ ವ್ಯಕ್ತಿ ಮುಖ್ಯ ಕೋಚ್ ಆಗಿದ್ದಾನೆ...ರಾಷ್ಟ್ರೀಯ ಚಾಂಪಿಯನ್ ಆಗಿದ್ದ ನನ್ನನ್ನು ತಂಡದಿಂದ ಹೊರಗಿಟ್ಟಿದ್ದಾನೆ. ರಿಯೋ ಗೇಮ್ಸ್‌ನಲ್ಲಿ ವಾಪಸಾಗಿದ್ದರೂ, ತಂಡದಿಂದ ಹೊರಗಿಡಲಾಗಿತ್ತು. ಉತ್ತಮ ಪ್ರದರ್ಶನ ಹೊರತಾಗಿಯೂ 2006 ರಿಂದ 2016ರ ತನಕ ಪದೇ ಪದೇ ತಂಡದಿಂದ ಹೊರಹಾಕಲಾಗಿತ್ತು... ವಿಶ್ವದ ನಂ.9ನೇ ಆಟಗಾರ್ತಿಯಾಗಿ ತಂಡಕ್ಕೆ ವಾಪಸಾದಾಗ, ಆತ ನನ್ನ ಹೆತ್ತವರಿಗೆ ಬೆದರಿಕೆ ಹಾಕಿದ್ದ. ನನಗೆ ಕಿರುಕುಳ ನೀಡಿದ್ದ. ಎಲ್ಲ ರೀತಿಯಲ್ಲೂ ನನ್ನನ್ನು ಏಕಾಂಗಿ ಮಾಡಲಾಗಿತ್ತು’’ ಎಂದು ಜ್ವಾಲಾ ಟ್ವೀಟ್ ಮಾಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಮಾಜಿ ಚಾಂಪಿಯನ್ ಜ್ವಾಲಾ ಟ್ವೀಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದಿದ್ದರೂ ಅವರು ಮುಖ್ಯ ರಾಷ್ಟ್ರೀಯ ಕೋಚ್ ಪಿ. ಗೋಪಿಚಂದ್‌ರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News