ಆಳ್ವಾಸ್ ಛಾಯಾಚಿತ್ರ ಸಿರಿ 2018: ಛಾಯಾಗ್ರಹಣಕಲೆಗೆ ರಾಷ್ಟ್ರ ಮಟ್ಟದ ಸ್ಪರ್ಧೆ

Update: 2018-10-10 14:28 GMT

ಮೂಡುಬಿದಿರೆ, ಅ.10: ಛಾಯಾಚಿತ್ರ ಕಲೆಗೂ ವಿಶೇಷಸ್ಥಾನಮಾನ ಕಲ್ಪಿಸಿಕೊಡುವ ಉದ್ದೇಶದಿಂದ ಈ ಬಾರಿಯೂ ಆಳ್ವಾಸ್ ನುಡಿಸಿರಿಯಲ್ಲಿ ಛಾಯಾ ಗ್ರಹಣಕಲೆಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ.

ಮೊನೋಕ್ರೋಮ್, ವೈಲ್ಡ್ ಲೈಫ್, ರೂರಲ್ ಲೈಫ್ ಮತ್ತು ಮೈ ಕಲರ್‍ಫುಲ್‍ಇಂಡಿಯಾ ನಾಲ್ಕು ಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿಲಾಗಿದೆ. ಯಾವುದೇ ಪ್ರವೇಶ ಶುಲ್ಕ ವಿಲ್ಲದ ಈ ಸ್ಫರ್ಧಾ ವಿಜೇತರಿಗೆ ಪ್ರತಿ ವಿಭಾಗದಲ್ಲಿ ಪ್ರಥಮ7000 ರೂ., ದ್ವಿತೀಯ 5000 ಮತ್ತು ತೃತೀಯ3000 ರೂ. ನಗದು ಬಹುಮಾನವನ್ನು ಇರಿಸಲಾಗಿದೆ. ಪ್ರತಿ ವಿಭಾಗದಲ್ಲೂ ಸಮಾಧಾನಕರ ಬಹುಮಾನವೂ ಇದೆ.

ರಾಷ್ಟ್ರೀಯ ಮಾನ್ಯತೆ ಫೆಡರೇಶನ್‍ ಆಫ್‍ ಇಂಡಿಯನ್ ಫೊಟೋಗ್ರಾಫಿ ಸಂಸ್ಥೆಯಿಂದ ಈ ಬಾರಿ ಮಾನ್ಯತೆ ದೊರಕಿದ್ದು ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯಶಾಲಿಗಳಾಗುವವರಿಗೆ ಅಂಕಗಳೂ ದೊರಕಲಿದೆ. ನಾಲ್ಕು ಭಾಗಗಳಲ್ಲಿ ಜರಗುವ ಸ್ಪರ್ಧೆಯಲ್ಲಿ  ವಿಜೇತರ ಹಾಗೂ ಆಯ್ಕೆಯಾದ ಒಟ್ಟು 100 ಚಿತ್ರಗಳನ್ನು ಆಳ್ವಾಸ್ ನುಡಿಸಿರಿ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು.

ಚಿತ್ರಗಳನ್ನು ಆನ್‍ಲೈನ್ ಮೂಲಕವೇ ಕಳುಹಿಸಬೇಕು. ಚಿತ್ರಗಳನ್ನು ಕಳುಹಿಸಲು ಅ. 23ರಂದು ಕೊನೆಯ ದಿನಾಂಕವಾಗಿದೆ. ಅದಕ್ಕೆ ಬೇಕಾದ ಸಕಲ ಮಾಹಿತಿಯನ್ನು www.photosiri.com ಲಭ್ಯವಿದೆ.

ಛಾಯಾಚಿತ್ರ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಬೆಂಗಳೂರಿನ ಬಿ. ಶ್ರೀನಿವಾಸ, ಸಿ.ಆರ್. ಸತ್ಯನಾರಾಯಣ್ ಹಾಗೂ ಎ.ಜಿ. ಲಕ್ಷ್ಮೀನಾರಾಯಣ್‍ ಅವರು ತೀರ್ಪುಗಾರರಾಗಿರುತ್ತಾರೆ.  ಹಿರಿಯ ಛಾಯಾಚಿತ್ರಕಲಾವಿದರಾದ ಯಜ್ಞ ಮಂಗಳೂರು, ಜಿನೇಶ್ ಪ್ರಸಾದ್, ರವಿಪೊಸವಣಿಕೆ, ಜನಾರ್ದನ ಕೊಡವೂರು ಹಾಗೂ ಅಪುಲ್‍ ಇರಾ ಸಲಹೆಗಾರರಾಗಿದ್ದಾರೆ.

ಈ ಛಾಯಾಚಿತ್ರ ಸಿರಿ ಸ್ಪರ್ಧೆಯಲ್ಲಿ ವಯೋಮಿತಿ ಇಲ್ಲದೆ ಹವ್ಯಾಸಿ ಹಾಗೂ ವೃತ್ತಿಪರರೂ ಭಾಗವಹಿಸಬಹುದೆಂದು ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News