ಮಂಗಳೂರು: ಸ್ನೇಹಾಲಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Update: 2018-10-10 16:26 GMT

ಮಂಗಳೂರು, ಅ.10: ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಮಂಜೇಶ್ವರದ ಪಾವೂರು ಸ್ನೇಹಾಲಯದ ಸಭಾಂಗಣದಲ್ಲಿ ಬದಲಾಗುತ್ತಿರುವ ವಿಶ್ವದಲ್ಲಿ ಯುವಜನತೆ ಮತ್ತು ,ಮಾನಸಿಕ ಆರೋಗ್ಯ ಎಂಬ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಾವೂರು ಚರ್ಚ್‌ನ ಧರ್ಮಗುರುಗಳಾದ ವಂ.ವರ್ಗೀಸ್ ಮಾತನಾಡುತ್ತಾ ಆಧುನಿಕ ಜಗತ್ತಿನಲ್ಲಿ ವೇಗದ ಗತಿಯಲ್ಲಿ ಸಾಗುತ್ತಿರುವ ಬದುಕಿನಲ್ಲಿ ಮನಷ್ಯ ಒತ್ತಡಕ್ಕೆ ಒಳಗಾಗಿ ತನ್ನ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಪ್ರತಿ ವ್ಯಕ್ತಿಗೂ ಮಾನಸಿಕ ಆರೋಗ್ಯ ವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಕುಟುಂಬಗಳಲ್ಲಿ ಮಕ್ಕಳು ತಮ್ಮ ಭಾವನೆಗಳನ್ನು ಕುಟುಂಬದ ಜೊತೆ ಹಂಚಿಕೊಳ್ಳುವ ವಾತಾವರಣ ಕಡಿಮೆಯಾಗುತ್ತಿರುವುದು ಈ ರೀತಿಯ ವಾತಾವರಣ ನಿರ್ಮಾಣಕ್ಕೆ ಒಂದು ಕಾರಣವಾಗಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮ ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಜೋಸೆಫ್ ಕ್ರಾಸ್ತಾ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿದ್ದರು. ಸೈಂಟ್ ಆಲೋಶಿಯಸ್ ಕಾಲೇಜಿನ ಸಾಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲವೀನಾ ಲೋಬೊ ಹಾಗೂ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜಿನ ಮಾನಸಿಕ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಅರುಣ್ ಯೆಡ್ಯಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ವಾರ್ಡ್ ಸದಸ್ಯ ಮೂಸಾ,ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಕೆಎಂ ಅಶ್ರಫ್,ಸ್ನೆಹಾಲಯದ ಪ್ರತಿನಿಧಿ ರಾಜೇಶ್ ಸ್ವಾಗತಿಸಿದರು. ಸೈಂಟ್ ಅಲೊಶಿಯಸ್ ಐಟಿಐ,ರೊಶನಿ ನಿಲಯ ಮಂಗಳೂರು,ಹಿರಾ ಮಹಿಳಾ ಶಿಕ್ಷಣ ಸಂಸ್ಥೆ ಪೆರ್ಮನ್ನೂರು,ಮಂಗಳೂರು ವಿಶ್ವ ವಿದ್ಯಾನಿಲಯ ಸಮಾಜ ಕಾರ್ಯ ವಿಭಾಗ, ಯೆನೆಪೊಯ ವಿಶ್ವ ವಿದ್ಯಾನಿಲಯ, ಮಂಜೇಶ್ವರ ಉದಯ ಶಿಕ್ಷಣ ಸಂಸ್ಥೆ, ಗೋವಿಂದ ಪೈ ಸ್ಮಾರಕ ಸಂಸ್ಥೆ ಮಂಜೇಶ್ವರ ಸೇರಿದಂತೆ 179 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News