ಎ.ಜೆ.ಆಸ್ಪತ್ರೆ: ಕರಾವಳಿ ಕರ್ನಾಟಕದ ಮೊದಲ ಸಮಗ್ರ ನೋವು, ಉಪಶಮನ ಕೇಂದ್ರ ಆರಂಭ

Update: 2018-10-10 16:42 GMT

ಮಂಗಳೂರು, ಅ.10: ಎ. ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕರಾವಳಿ ಕರ್ನಾಟಕದ ಮೊದಲ ಸಮಗ್ರ ನೋವು ಮತ್ತು ಉಪಶಮನ ಕೇಂದ್ರ ಆರಂಭಗೊಂಡಿದೆ.

ಜೀವನವಿಡೀ ಖಾಯಿಲೆಯಿಂದ ಬಾಧಿತವಾಗಿ ಕಡಿಮೆ ಶೇಷಾಯುಷ್ಯ ಹೊಂದಿರುವ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಅವರ ಕುಟುಂಬವನ್ನು ಬೆಂಬಲಿಸುವ ಉದ್ದೇಶ ಉಪಶಮನ ಕೇಂದ್ರದ್ದಾಗಿದೆ. ಪೂರ್ಣವಾಗಿ ಗುಣಪಡಿಸಲಾಗದ ಆದರೆ ಅದರ ತೀವ್ರತೆ ಕಡಿಮೆ ಮಾಡುವ ಆರೈಕೆ ವಿಧಾನ ಇದಾಗಿದೆ. ಕ್ಯಾನ್ಸರ್ ಅಲ್ಲದೆ ಮೂತ್ರಕೋಶ, ಹೃದಯ, ಜಠರ, ಶ್ವಾಸಕೋಶ ಮತ್ತು ನರ ಸಂಬಂಧಿ ರೋಗ ಉಲ್ಬಣಾವಸ್ಥೆಗೆ ತಲುಪಿ ಜೀವನದ ಸಂಧ್ಯಾಕಾಲದಲ್ಲಿರುವವರಿಗೆ ಮತ್ತು ಬದುಕಿನ ಕೊನೆಯ ದಿನಗಳಲ್ಲಿ ಇರುವವರಿಗೆ ಚಿಕಿತ್ಸೆ ಮತ್ತು ಆರೈಕೆ ನೀಡುವುದು ಈ ಕೇಂದ್ರದ ಉದ್ದೇಶ ಮತ್ತು  ಸಮಗ್ರ ಪೂರ್ಣ ನಿರ್ವಹಣೆಗೆ ಅವಕಾಶ.

► ಮುಂಚಿತವಾಗಿ ರೋಗ ಗುರುತಿಸಿ ಅದರಿಂದಾಗುವ ಪೀಡನೆ, ನೋವನ್ನು ಕಡಿಮೆ ಮಾಡುವುದು. ನಿರ್ದಿಷ್ಟ ಮೌಲ್ಯಮಾಪನ ಮೂಲಕ ಮತ್ತು ದೈಹಿಕ, ಮಾನಸಿಕ ಮಧ್ಯಪ್ರವೇಶದ ಮೂಲಕ ಮತ್ತು ಆಧ್ಯಾತ್ಮಿಕ ತೆಯ ಮೂಲಕ ಜೀವಾಪಾಯ ಇರುವ ಆದರೆ ಗುಣಪಡಿಸಲಾಗದ ರೋಗಿಗಳಿಗೆ ಸಾಂತ್ವನ ವ್ಯವಸ್ಥೆ.

► ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಒದಗಿಸುವುದು.

► ಜೀವನ ಕೊನೆಯ ಹಂತದವರೆಗೂ ಆರೋಗ್ಯ ಉಪಶಮನ ವ್ಯವಸ್ಥೆ. 

► ಶಾಂತಿಯುತ ಮತ್ತು ಗೌರವಾರ್ಹ ಸಾವು ಬರುವವರೆಗೆ ಅನಗತ್ಯ ಮತ್ತು ಪ್ರಯೋಜನಕಾರಿಯಲ್ಲದ ಮಧ್ಯಪ್ರವೇಶಗಳನ್ನು ತಡೆಯುವುದು. ಸಮುದಾಯ ಆಧಾರಿತ ಉಪಶಮನ ಆರೈಕೆ ಜಾಲದ ಸಮನ್ವಯ ಮತ್ತು ವ್ಯವಸ್ಥೆ.

ಉಪಶಮನ ವೈದ್ಯಕೀಯ ಉಪಚಾರವನ್ನು ಡಾ. ನವೀನ್ ರುಡಾಲ್ಫ್ ರಾಡ್ರಿಗಸ್ ನೇತೃತ್ವದಲ್ಲಿ ಬಹುಶಿಸ್ತೀಯ ತರಬೇತು ಪಡೆದ ವೈದ್ಯರ ತಂಡ ಒದಗಿಸುತ್ತದೆ. ಡಾ. ನವೀನ್ ಉಪಶಮನ ಆರೈಕೆ ತಜ್ಞರಾಗಿದ್ದು ಐ.ಪಿ.ಎಂ. ಕಲ್ಲಿಕೋಟೆಯಿಂದ ಉಪಶಮನ ವೈದ್ಯಕೀಯ ಪದವಿ ಪಡೆದಿದ್ದು ಉತ್ತರ ಆಸ್ಟ್ರೇಲಿಯಾ, ಯು.ಕೆ. ಗಳಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ಉಪಶಮನ ಆರೈಕೆಯಲ್ಲಿ 15 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News