ಶಾಸಕರು ನೇರವಾಗಿ ಜನರ ಬಳಿ ತೆರಳಿ ಹಕ್ಕುಪತ್ರ ವಿತರಿಸುತ್ತಿರುವುದು ಪ್ರಶಂಶನೀಯ: ನಳಿನ್ ಕುಮಾರ್

Update: 2018-10-10 17:10 GMT

ಬಂಟ್ವಾಳ, ಅ. 10: ಕಂದಾಯ ಇಲಾಖೆ ಬಂಟ್ವಾಳ, ರಾಯಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸರಕಾರದ 94ಸಿ ಹಕ್ಕುಪತ್ರ ಮತ್ತು ವಿವಿಧ ಸರಕಾರಿ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮ ಬುಧವಾರ ಸಂಜೆ ರಾಯಿ ಗ್ರಾಪಂಚಾಯತ್‍ನಲ್ಲಿ ನಡೆಯಿತು.

ಈ ಹಿಂದೆ ತಾಲೂಕು ಮಟ್ಟದಲ್ಲಿ ರಾಜಕೀಯ ಪ್ರೇರಿತವಾಗಿ ಅದ್ದೂರಿಯಾಗಿ ನಡೆಸುತ್ತಿದ್ದ ಹಕ್ಕುಪತ್ರ ವಿತರಣೆ ವ್ಯವಸ್ಥೆಗೆ ಬದಲಾಗಿ ಶಾಸಕರು ನೇರವಾಗಿ ಜನರ ಬಳಿ ತೆರಳಿ ಹಕ್ಕುಪತ್ರ ವಿತರಿಸುತ್ತಿರುವುದು ಪ್ರಶಂಶನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಈ ಸಂದರ್ಭ ತಿಳಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ, ತಾಪಂ ಸದಸ್ಯೆ ಮಂಜುಳಾ ಸದಾನಂದ, ಗ್ರಾಪಂ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಲತಾ ಮತ್ತಿತರ ಸದಸ್ಯರು ಶುಭ ಹಾರೈಸಿದರು.

ಇದೇ ವೇಳೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ವಿತರಣೆ, 70 ಮಂದಿಗೆ ಹಕ್ಕುಪತ್ರ ವಿತರಣೆ, ರಾಷ್ಟ್ರೀಯ ಕುಟುಂಬ ಸಹಾಯಧನ, ಪ್ರಾಕೃತಿಕ ವಿಕೋಪ ಪರಿಹಾರಧನದ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ  ಶಾಸಕರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗ್ರಾಪಂ ಸದಸ್ಯರಾದ ಹರೀಶ ಆಚಾಯ9 ರಾಯಿ, ರಾಘವ ಅಮೀನ್, ಪದ್ಮನಾಭ ಗೌಡ, ಯಶೋಧಾ, ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಕೆ.ಪರಮೇಶ್ವರ ಪೂಜಾರಿ, ಚಂದಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಸ್ವಾಗತಿಸಿ, ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಜನಾದ9ನ ವಂದಿಸಿದರು. ಪತ್ರಕತ9 ಮೋಹನ್ ಕೆ. ಶ್ರೀಯಾನ್ ಕಾಯ9ಕ್ರಮ ನಿರೂಪಿಸಿದರು. ಗ್ರಾಮಕರಣಿಕ ಪರಿಕ್ಷೀತ್, ಸಹಾಯಕ ರಮೇಶ್ ಹೊಕ್ಕಾಡಿಗೋಳಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News