ಮಂಗಳೂರು: ಎಕ್ಸೆಲ್ಶಿಯರ್ ನಿಸಾನ್ ಶೋರೂಂನಲ್ಲಿ 2 ಕಾರುಗಳ ಅನಾವರಣ

Update: 2018-10-11 14:43 GMT

ಮಂಗಳೂರು, ಅ.10: ನಗರದ ಎಕ್ಸೆಲ್ಶಿಯಲ್ ನಿಸಾನ್ ಶೋರೂಂನಲ್ಲಿ ‘ಡಾಟ್ಸನ್ ಗೋ’ ಮತ್ತು ‘ಡಾಟ್ಸನ್ ಗೋ ಪ್ಲಸ್’ ಎಂಬ ಎರಡು ಕಾರುಗಳನ್ನು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೂಳೂರು ಸೈಂಟ್ ಆ್ಯಂಟನಿ ಚರ್ಚ್‌ನ ಧರ್ಮಗುರು ಫಾ.ವಿನ್ಸೆಂಟ್ ಡಿಸೋಜ, ಕಾವೂರು ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಆರ್.ನಾಯ್ಕೆ, ಬೈಕಂಪಾಡಿಯ ಟ್ರಾಫಿಕ್ ಎಸ್ಸೈ ಕಮಲಾ, ಉದ್ಯಮಿ ಸತೀಶ್ ಶೆಟ್ಟಿ, ಕೂಳೂರು ಬಸ್ತಿಕಾರ್ ಹಾರ್ಡ್‌ವೇರ್ಸ್‌ನ ದೇವದಾಸ ಶೆಣೈ ಹಾಗೂ ಎಕ್ಸೆಲ್ಶಿಯಲ್ ನಿಸಾನ್‌ನ ಎಂ.ಡಿ. ವಿನೋದ್ ಪಟೇಲ್ ಉಪಸ್ಥಿತರಿದ್ದರು.

ಡಾಟ್ಸನ್ ಗೋ ವಿಶೇಷತೆಗಳು

ಬ್ರೇಕ್ ಅಸಿಸ್ಟ್ ಜೊತೆಗೆ ಎಬಿಎಸ್ ಮತ್ತು ಇಬಿಡಿ ವ್ಯವಸ್ಥೆ, ಎರಡು ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್, 180 ಎಂ.ಎಂ ಗ್ರೌಂಡ್ ಕ್ಲಿಯರೆನ್ಸ್, 14 ಇಂಚು ಡೈಮಂಡ್ ಕಟ್ ಎಲಾಯ್ ಚಕ್ರಗಳು, ಆ್ಯಂಡ್ರಾಯ್ಡ್ ಆಧಾರಿತ ಆ್ಯಪಲ್‌ನ ಕಾರ್ ಪ್ಲೇ ಮತ್ತು ಡೇ ಟೈಮ್ ದೀಪದ ಜೊತೆಗೆ 7 ಇಂಚಿನ ಟಚ್‌ಸ್ಕ್ರೀನ್ ನ್ಯಾವಿಗೇಶನ್ ಹೊಂದಿದ್ದು ಐದು ವಿವಿಧ ಬಣ್ಣಗಳಲ್ಲಿ ಲಭ್ಯ.

ಡಾಟ್ಸನ್ ಗೋ ಪ್ಲಸ್‌ನ ವಿಶೇಷತೆಗಳು

ಎರಡು ಬಣ್ಣಗಳ ಪ್ರೀಮಿಯಂ ಆಂತರಿಕ ವಿನ್ಯಾಸ, ಏಳು ಮಂದಿಯ ಆಸನ ವ್ಯವಸ್ಥೆ, ಬ್ರೇಕ್ ಅಸಿಸ್ಟ್ ಜೊತೆಗೆ ಎಬಿಎಸ್ ಮತ್ತು ಇಬಿಡಿ ವ್ಯವಸ್ಥೆ, ರಿವರ್ಸ್ ಪಾರ್ಕಿಂಗ್ ಸೆನ್ಸರ್, 180 ಎಂ.ಎಂ ಗ್ರೌಂಡ್ ಕ್ಲಿಯರೆನ್ಸ್, 14 ಇಂಚು ಡೈಮಂಡ್ ಕಟ್ ಎಲಾಯ್ ಚಕ್ರಗಳು, ಆ್ಯಂಡ್ರಾಯ್ಡ್ ಆಧಾರಿತ ಆ್ಯಪಲ್‌ನ ಕಾರ್ ಪ್ಲೇ ಮತ್ತು ಡೇ ಟೈಮ್ ದೀಪದ ಜೊತೆಗೆ 7 ಇಂಚಿನ ಟಚ್‌ಸ್ಕ್ರೀನ್ ನ್ಯಾವಿಗೇಶನ್ ಹೊಂದಿದೆ.

ಡಾಟ್ಸನ್ ಗೋ ಶೋರೂಂ ಬೆಲೆ 3,29,000 ರೂ.ನಿಂದ ಆರಂಭವಾಗಲಿದೆ ಮತ್ತು ಡಾಟ್ಸನ್ ಗೋ ಪ್ಲಸ್ ಬೆಲೆ 3,83,000 ರೂ.ನಿಂದ ಆರಂಭವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರಿನಲ್ಲಿರುವ ಎಕ್ಸೆಲ್ಶಿಯಲ್ ನಿಸಾನ್ ಶೋರೂಂ ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News