ಮಾ. 27ರಿಂದ ಸೋಮೇಶ್ವರ ಉಚ್ಚಿಲ ಉರೂಸ್‌ಗೆ ಸಿದ್ಧತೆ

Update: 2018-10-11 08:51 GMT

ಮಂಗಳೂರು, ಅ.11: ಸೋಮೇಶ್ವರ ಉಚ್ಚಿಲ 407 ಜುಮಾ ಮಸೀದಿಯ ವಠಾರದಲ್ಲಿರುವ ಹಝ್ರತ್ ಸೈಯದ್ ಅರಬಿ ವಲಿಯುಲ್ಲಾಹಿ ಅವರ ಹೆಸರಿನಲ್ಲಿ 3 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು ಈ ಬಾರಿ 2019ರ ಮಾರ್ಚ್ 27ರಿಂದ ಎಪ್ರಿಲ್ 7ರವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಉಚ್ಚಿಲ ಹೇಳಿದರು.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಉರೂಸ್ ಕಾರ್ಯಕ್ರಮಕ್ಕೆ ಕರ್ನಾಟಕ ಮತ್ತು ಕೇರಳದ ಖ್ಯಾತ ವಿದ್ವಾಂಸರು, ಉಲೆಮಾ-ಉಮರಾಗಳು, ರಾಜಕೀಯ ಮತ್ತು ಸಾಮಾಜಿಕ ಹಾಗೂ ಸರ್ವಧರ್ಮದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಸೀದಿಯ ಅಧ್ಯಕ್ಷ ಪಿ.ಎ.ಅಬ್ಬಾಸ್ ಹಾಜಿ ಪೆರಿಬೈಲ್, ಉಪಾಧ್ಯಕ್ಷ ಯು. ಅಬೂಬಕರ್ ಹಾಜಿ, ಜೊತೆ ಕಾರ್ಯದರ್ಶಿ ಅಬ್ಬಾಸ್ ಯು.ಎಂ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News