ಮಂಗಳೂರು: ಸಮೃದ್ಧ ಜೀವನ್ ಫುಡ್ ಇಂಡಿಯಾ ವಿರುದ್ಧ ಪ್ರತಿಭಟನೆ

Update: 2018-10-11 10:25 GMT

ಮಂಗಳೂರು, ಅ.11: ಮಹಾರಾಷ್ಟ್ರ ಮೂಲದ ಸಮೃದ್ಧ ಜೀವನ್ ಫುಡ್ಸ್ ಇಂಡಿಯಾ ಲಿ. 2014ರಲ್ಲಿ ಮಂಗಳೂರಿನಲ್ಲಿ ಶಾಖೆ ತೆರೆದು ಸ್ವ ಉದ್ಯೋಗ ಕೊಡಿಸುವುದಾಗಿ ಆಶ್ವಾಸನೆ ನೀಡಿ ಹಲವು ಮಂದಿ ನಿರುದ್ಯೋಗಿಗಳನ್ನು ಸಂಸ್ಥೆಯ ಏಜೆಂಟರನ್ನಾಗಿಸಿಕೊಂಡು ಗ್ರಾಹಕರಿಂದ ಹಣ ವಸೂಲಿ ಮಾಡಿ ಇದೀಗ ಗ್ರಾಹಕರಿಗೂ, ಏಜೆಂಟರಿಗೂ ವಂಚಿಸಿದ್ದನ್ನು ಖಂಡಿಸಿ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ಗುರುವಾರ ನಗರದ ನೆಹರೂ ಮೈದಾನಾದಲ್ಲಿ ಸಮೃದ್ಧ ಹಿತರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ವೇದಿಕೆಯ ಅಧ್ಯಕ್ಷ ಹರೀಶ್ ಕುಮಾರ್ ಎಸ್., ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ, ಜೊತೆ ಕಾರ್ಯದರ್ಶಿ ಶೇಷಗಿರಿ, ಸಂಘಟನಾ ಕಾರ್ಯದರ್ಶಿ ಗಳಾದ ಹಸೀನಾ ಬಾನು, ಯೋಗೀಶ್ ಆಚಾರ್ಯ, ಶರಣ್ ಪಂಪ್‌ವೆಲ್ ಮತ್ತಿತರರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News