ವಿಬ್ ಗಯಾರ್ ಶಿಕ್ಷಣ ಸಂಸ್ಥೆಯಿಂದ ಕೂಳೂರಿನಲ್ಲಿ ಶಾಲೆ: ಅಶೀಶ್ ಟಿಬ್ದಿವಾಲ್

Update: 2018-10-11 11:54 GMT

ಮಂಗಳೂರು, ಅ.11:ಅಂತಾರಾಷ್ಟ್ರೀಯ  ಶಿಕ್ಷಣ ಸಂಸ್ಥೆ ವಿಬ್ ಗಯಾರ್ ಸಮೂಹದ ವತಿಯಿಂದ ನಗರದ ಕೂಳೂರಿನಲ್ಲಿ ಪ್ರಥಮ ಬಾರಿಗೆ ಶಾಲೆಯನ್ನು ಆರಂಭಿಸಲು ನಿರ್ಧರಿಸಿದೆ ಎಂದು ವಿಬ್ ಗಯಾರ್ ಗ್ರೂಪ್ ಆಫ್ ಸ್ಕೂಲ್‌ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶೀಶ್ ಟಿಬ್ದಿವಾಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದೇಶದಲ್ಲಿ 33 ಶಾಲೆಗಳನ್ನು ಆರಂಭಿಸಿರುವ ಸಂಸ್ಥೆಯ ವತಿಯಿಂದ ಕರ್ನಾಟಕದಲ್ಲಿ14 ಶಾಲೆ ಗಳನ್ನು, ಮಂಗಳೂರಿನಲ್ಲೂ ಎರಡರಿಂದ ಮೂರು ಶಾಲೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ಕತಾರ್  ಸೇರಿದಂತೆ ದೇಶದಲ್ಲಿ 45 ಶಾಲೆಗಳನ್ನು ತೆರೆಯುವ ಗುರಿ ಹೊಂದಿರುವುದಾಗಿ ಅಶೀಶ್ ಟಿಬ್ದಿವಾಲ ತಿಳಿಸಿದ್ದಾರೆ.

ಪೂರ್ವ ಪ್ರಾಥಮಿಕ ದಿಂದ 5ನೆ ತರಗತಿಯವರೆಗೆ ಈ ಶಾಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು, ಮಕ್ಕಳ ಕೇಂದ್ರೀಕೃತ ಶಿಕ್ಷಣ ದೊಂದಿಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾದ ಶಿಕ್ಷಣ ವನ್ನು ಒದಗಿಸುವ ಗುರಿಹೊಂದಿದೆ ಎಂದು ಅಶೀಶ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿ ಯಲ್ಲಿ ದಕ್ಷಿಣ ವಲಯದ ಕ್ಲಾಸ್ 2 ಪ್ರಾಂಶುಪಾಲ ರೋಶನ್ ಡಿ ಸೋಜ ಹಾಗೂ ದಕ್ಷಿಣ ವಲಯದ ಮುಖ್ಯಸ್ಥ ಎ.ಕೆ.ಮುನೀರ್ ಮೊದಲಾದ ವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News