750 ಅಂಕಗಳ ಪತನ ಕಂಡ ಸೆನ್ಸೆಕ್ಸ್; 10,300ಕ್ಕೆ ಕುಸಿದ ನಿಫ್ಟಿ

Update: 2018-10-11 13:53 GMT

ಮುಂಬೈ,ಅ.11: ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟದ ಭರಾಟೆ ತೀವ್ರವಾದ ಕಾರಣ ಜಾಗತಿಕ ಸೂಚ್ಯಂಕದಲ್ಲಿ ಉಂಟಾದ ನಷ್ಟದ ಪರಿಣಾಮ ಭಾರತೀಯ ಶೇರು ಮಾರುಕಟ್ಟೆಯ ಮೇಲಾಗಿದ್ದು ಗುರುವಾರ ಬಿಎಸ್‌ಇ ಸೆನ್ಸೆಕ್ಸ್ 750 ಅಂಕಗಳ ಕುಸಿತ ಕಂಡು ಆರು ತಿಂಗಳ ಕಳಪೆ ಮಟ್ಟಕ್ಕೆ ಕುಸಿದರೆ ನಿಫ್ಟಿ 10,300ಕ್ಕೂ ಕೆಳಗೆ ದಿನವನ್ನು ಅಂತ್ಯಗೊಳಿಸಿದೆ.

ವಿದೇಶಿ ಬಂಡವಾಳದ ನಿರಂತರ ಹೊರಹರಿವೂ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. ಬುಧವಾರ 461.42 ಅಂಕಗಳ ಏರಿಕೆ ಕಂಡಿದ್ದ ಸೆನ್ಸೆಕ್ಸ್ ಗುರುವಾರದಂದು ದಿನದ ಆರಂಭದಲ್ಲಿ ಒಂದು ಸಾವಿರ ಅಂಕಗಳ ಕುಸಿತ ಕಂಟು 34,000 ಮಟ್ಟವನ್ನು ದಾಟಿ 33,723.53ಕ್ಕೆ ತಲುಪಿತ್ತು.

ನಂತರ ಮಧ್ಯಾಹ್ನದ ವ್ಯವಹಾರದಲ್ಲಿ ಕೊಂಚ ಚೇತರಿಕೆ ಕಂಡ ಸೆನ್ಸೆಕ್ಸ್ 34,325.09ಕ್ಕೆ ತಲುಪಿತು. ಅಂತಿಮವಾಗಿ ದಿನದ ಅಂತ್ಯಕ್ಕೆ 759.74 ಅಂಕಗಳ ಕುಸಿತ ಕಂಡು 34,001.15ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ದಿನದ ವಹಿವಾಟಿನಲ್ಲಿ 10,138.60 ಮತ್ತು 10,335.95ರ ಮಧ್ಯೆ ಆಡುತ್ತಿದ್ದ ಎನ್‌ಎಸ್‌ಇ ನಿಫ್ಟಿ ಅಂತಿಮವಾಗಿ 225.45 ಅಂಕಗಳ ಕುಸಿತ ಕಂಡು 10,234.65ಕ್ಕೆ ದಿನದ ವಹಿವಾಟು ಮುಗಿಸಿತು.

ಏಶ್ಯಾದ ಸ್ಟಾಕ್‌ಗಳು ಕೆಳಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿದರೆ ಯೂರೋಪ್ ಸ್ಟಾಕ್‌ಗಳೂ ಗುರುವಾರದಂದು 18 ತಿಂಗಳಲ್ಲೇ ಕಳಪೆ ಮಟ್ಟಕ್ಕಿಳಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News