×
Ad

ಪ್ಯಾರಾ ಏಶ್ಯನ್ ಗೇಮ್ಸ್‌: ಶರದ್ ಕುಮಾರ್‌ಗೆ ಚಿನ್ನ

Update: 2018-10-11 23:39 IST

ಜಕಾರ್ತ, ಅ.11: ಇಲ್ಲಿ ನಡೆಯುತ್ತಿರುವ ಪ್ಯಾರಾ ಏಶ್ಯನ್ ಗೇಮ್ಸ್‌ನ ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ (ಟಿ 42/63) ಭಾರತದ ಹಾಲಿ ಚಾಂಪಿಯನ್ ಶರದ್‌ಕುಮಾರ್ ದಾಖಲೆಯೊಂದಿಗೆ ಚಿನ್ನ ಪಡೆದರು.

26ರ ಹರೆಯದ ಶರದ್ ಸತತ ಎರಡನೇ ಬಾರಿ ಚಿನ್ನ ಗೆದ್ದುಕೊಂಡಿದ್ದಾರೆ.

ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಶರದ್ 1.90 ಮೀಟರ್ ಎತ್ತರಕ್ಕೆ ಜಿಗಿದು ಚಿನ್ನ ಬಾಚಿಕೊಂಡರು. ರಿಯೋ ಪ್ಯಾರಾಲಿಂಪಿಕ್‌ನಲ್ಲಿ ಕಂಚು ಪಡೆದಿದ್ದ ವರುಣ್ ಭಾಟಿ (1.82 ಮೀ) ಬೆಳ್ಳಿ ಮತ್ತು ರಿಯೋ ಒಲಿಂಪಿಕ್ ಚಾಂಪಿಯನ್ ತಂಗವೇಲು ಮರಿಯಪ್ಪನ್(1.67 ಮೀ) ಕಂಚು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News