ಪ್ರೊ ಕಬಡ್ಡಿ: ಪಾಟ್ನಾ ಪೈರೆಟ್ಸ್‌ಗೆ ಜಯ
Update: 2018-10-11 23:41 IST
ಚೆನ್ನೈ, ಅ.11: ಪ್ರೊ ಕಬಡ್ಡಿ ಟೂರ್ನಿಯ 9ನೇ ಪಂದ್ಯದಲ್ಲಿ ಯು.ಪಿ .ಯೋಧ ವಿರುದ್ಧ ಪಾಟ್ನಾ ಪೈರೆಟ್ಸ್ ತಂಡ 43-41 ಅಂತರದಲ್ಲಿ ರೋಚಕ ಜಯ ಗಳಿಸಿದೆ.
ಜವಾಹರ್‌ಲಾಲ್ ನೆಹರೂ ಇಂಡೋರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಟ್ನಾ ತಂಡ ಮೊದಲ ಜಯ ಗಳಿಸಿತು. ಪಾಟ್ನಾ ತಂಡದ ನಾಯಕ ಪ್ರದೀಪ್ ನರ್ವಾಲ್16 ಪಾಯಿಂಟ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ತಂಡ 36-27 ಅಂತರದಲ್ಲಿ ಜಯ ಗಳಿಸಿತು.