ಸುಳ್ಯ: ಶಿಕ್ಷಕನಿಂದ ಮುಖ್ಯೋಪಾಧ್ಯಾಯಿನಿ ಮೇಲೆ ಹಲ್ಲೆಗೆ ಯತ್ನ !

Update: 2018-10-12 11:45 GMT

ಸುಳ್ಯ, ಅ. 12: ಖಾಸಗಿ ಕಾಲೇಜಿನ ಹಿಂದಿ ಶಿಕ್ಷಕನೋರ್ವ ಅಲ್ಲಿನ ಮುಖ್ಯೋಪಾಧ್ಯಾಯಿನಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಕಾಲೇಜಿನ ಹಿಂದಿ ಶಿಕ್ಷಕ ರವೀಂದ್ರ ಎಂಬಾತ ವಿದ್ಯಾರ್ಥಿನಿಯರ ಶೌಚಾಲಯದ ಬಳಿ ನಿಂತಿರುವುದನ್ನು ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಅವರು ಪ್ರಶ್ನಿಸಿದ್ದಾರೆನ್ನಲಾಗಿದೆ. ಈ ವಿಚಾರಕ್ಕೆ ಕೋಪಗೊಂಡ ರವೀಂದ್ರ, ಪ್ರೇಮಲತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾಗಿರುವುದು ತರಗತಿಯಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ.

ಘಟನೆಯ ಬಗ್ಗೆ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈಗಾಗಲೇ ಶಿಕ್ಷಕ ರವೀಂದ್ರ ಅವರನ್ನು ಸಂಸ್ಥೆಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News