ನಾಲ್ಕು ಲಕ್ಷ ರೂ. ಮುಖಬೆಲೆಯ ನಕಲಿ ನೋಟು ವಶ: ಐವರ ಸೆರೆ

Update: 2018-10-12 14:15 GMT
ಸಾಂದರ್ಭಿಕ ಚಿತ್ರ

ಥಾಣೆ,ಅ.12: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಶುಕ್ರವಾರ ವಾಹನವೊಂದರಲ್ಲಿದ್ದ ನಾಲ್ಕು ಲಕ್ಷ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಐದು ಮಂದಿಯನ್ನು ಬಂಧಿಸಿದ್ದಾರೆ. ನಕಲಿ ನೋಟುಗಳನ್ನು ಹೊಂದಿರುವ ಕೆಲಮಂದಿ ವಡ್ಪೆಯಲ್ಲಿರುವ ಪಾನ್ ಅಂಗಡಿಗೆ ಆಗಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ಬಲೆ ಬೀಸಿದ ಪೋಲೀಸರ ತಂಡ ಆರೋಪಿಗಳು ಪಾನ್ ಅಂಗಡಿಯಲ್ಲಿ ಸಿಗರೇಟ್ ಖರೀದಿಸುತ್ತಿದ್ದ ವೇಳೆ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 2,000ರೂ. ಮುಖಬೆಲೆಯ 203 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು, ರೆಹಾನ್ ಅಬ್ಬಾಸ್ ಶೇಕ್ (22), ಸಫದ್ ಮುಕ್ತಾರ್ ಅನ್ಸಾರಿ (19), ಅನೀಸ್ ಇಕ್ಬಾಲ್ ಶೇಕ್ (31), ಕಿಶೋರ್ ಫುಲರ್ (25) ಮತ್ತು ರೋಹಿತ್ ಸಿಂಗ್ (23) ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಈ ನಕಲಿ ನೋಟುಗಳ ಮೂಲ ಮತ್ತು ಅದನ್ನು ಎಲ್ಲಿಗೆ ತೆಗೆದೊಯ್ಯಲಾಗುತ್ತಿತ್ತು ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 489(ಬಿ), 489(ಸಿ) ಮತ್ತು 34ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News