‘ಮೀಟೂ’ಗೆ ಹೈಕೋರ್ಟ್ ನ್ಯಾಯಾಧೀಶರ ಬೆಂಬಲ

Update: 2018-10-12 16:49 GMT

ಮುಂಬೈ, ಅ.12: ದೇಶದಲ್ಲಿ ಈಗ ಗಮನಸೆಳೆದಿರುವ ‘ಮೀಟೂ’ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶ ಗೌತಮ್ ಪಟೇಲ್, ಪುರುಷ ಪ್ರಧಾನ ಜಗತ್ತು ಮಹಿಳೆಯರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಮೇಲಾಗಿರುವ ಲೈಂಗಿಕ ಕಿರುಕುಳ ಹಾಗೂ ಕಿರುಕುಳ ನೀಡಿರುವ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸುವ ಮಹಿಳೆಯರಿಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ನ್ಯಾ.ಪಟೇಲ್ ಹೇಳಿದ್ದಾರೆ. ಭಾರತೀಯ ವ್ಯಾಪಾರಿಗಳ ಮಂಡಳಿಯ ಮಹಿಳಾ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂತಹ ಪ್ರಕರಣಗಳಲ್ಲಿ ಸೂಕ್ತ ಪುರಾವೆಗಳಿದ್ದರೆ ಕಾನೂನು ಕ್ರಮ ಜರಗಿಸಬಹುದಾಗಿದೆ. ಆದ್ದರಿಂದ ತಮ್ಮ ಮೇಲಾಗಿರುವ ದೌರ್ಜನ್ಯದ ವಿರುದ್ಧ ಮಹಿಳೆಯರು ಧೈರ್ಯವಾಗಿ ಹೇಳಿಕೆ ನೀಡಬೇಕು ಎಂದು ಹೇಳಿದರು. ಇಂತಹ ಅತಿರೇಕದ ಲಿಂಗಭೇದ ಭಾವ ಹಾಗೂ ಪುರುಷ ಪ್ರಾಧಾನ್ಯತೆಯ ಸಂಸ್ಕೃತಿ ನ್ಯಾಯಾಂಗವನ್ನೂ ಬಿಟ್ಟಿಲ್ಲ.

ಮಹಿಳೆಯರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರು ಮಹಿಳೆಯರೆಂಬ ಕಾರಣಕ್ಕೆ ಇಂತಹ ಅತಿರೇಕದ ವರ್ತನೆ ನಡೆಯುತ್ತದೆ. ಇದು ಎಲ್ಲೆಡೆ ನಡೆಯುತ್ತಿರುತ್ತದೆ ಎಂದ ಅವರು, ಲಿಂಗ ತಟಸ್ಥತೆಯ ಸ್ಥಿತಿ ನೆಲೆಸುವಂತೆ ಪ್ರಯತ್ನಿಸಬೇಕಾಗಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News