ಮಾರ್ನಬೈಲು: ರೈಲಿನಡಿಗೆ ಸಿಲುಕಿ ಯುವಕ ಮೃತ್ಯು

Update: 2018-10-13 06:49 GMT

ಬಂಟ್ವಾಳ, ಅ.13: ರೈಲಿನಡಿಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಮಾರ್ನಬೈಲು ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. 

ಮೃತರಿಗೆ ಸುಮಾರು 35 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದ್ದು, ಗುರುತು ಪತ್ತೆಯಾಗಿಲ್ಲ. ಮೆಲ್ಕಾರ್ ಸಮೀಪದ ಮಾರ್ನಬೈಲು ನಲ್ಲಿ ರೈಲು ಹಳಿಯಲ್ಲಿ ರುಂಡ ಮತ್ತು ದೇಹ ಪ್ರತ್ಯೇಕ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ .

ಘಟನಾ ಸ್ಥಳಕ್ಕೆ ಬಂಟ್ವಾಳ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News