ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆ: ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಆಯ್ಕೆ

Update: 2018-10-13 12:15 GMT

ಭಟ್ಕಳ, ಅ. 13: ಇಲ್ಲಿನ ಪ್ರತಿಷ್ಠಿತ ಅಂಜುಮಾನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ  ಶ್ರೀಲತಾ ಹೆಗಡೆ ಬಾಬಾ ಅಟೋಮಿಕ ರಿಸರ್ಚ ಸೆಂಟರ್ ಮುಂಬೈ ನಡೆಸಿದ ‘ಲೇಸರ್ ಮತ್ತು ಮನುಕುಲಕ್ಕೆ ಅದರಿಂದಾದ ಪರಿಣಾಮ’ ಎಂಬ ವಿಷಯದಲ್ಲಿ ನಡೆಸಿದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಭಟ್ಕಳದ ಜನತಾ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಅಶೋಕ ಹೆಗಡೆ ಹಾಗೂ ರೂಪಾ ಹೆಗಡೆ ದಂಪತಿಯ ಪುತಿಯಾಗಿದ್ದಾರೆ. ಇವರ ಸಾಧನೆಗೆ ಸಂಸ್ಥೆಯ ಸಿಬ್ಬಂಧಿ ವರ್ಗ, ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News