ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸುವುದರಿಂದ ಶಬರಿಮಲೆ ಥಾಯ್ ಲ್ಯಾಂಡ್ ಆಗಲಿದೆ: ದೇವಸ್ವಂ ಬೋರ್ಡ್ ನ ಮಾಜಿ ಅಧ್ಯಕ್ಷ

Update: 2018-10-13 16:54 GMT

ಚೆನ್ನೈ, ಅ.13: ಶಬರಿಮಲೆಗೆ ಎಲ್ಲಾ ವಯೋಮಿತಿಯ ಮಹಿಳೆಯರು ಪ್ರವೇಶಿಸುವುದರಿಂದ ಅದು ಥಾಯ್ ಲ್ಯಾಂಡ್ ಆಗಿ ಬದಲಾಗಲಿದೆ’ ಎಂದು ದೇವಸ್ವಂ ಬೋರ್ಡ್ ನ ಮಾಜಿ ಅಧ್ಯಕ್ಷ ಗೋಪಾಲಕೃಷ್ಣನ್ ಹೇಳಿಕೆ ನೀಡಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಎಲ್ಲಾ ವಯೋಮಾನದವರು ಶಬರಿಮಲೆ ಪ್ರವೇಶಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಾತನಾಡಿದ ಅವರು, “ಶಬರಿಮಲೆಗೆ ಯಾವ ಸಹೋದರಿಯರೂ ಪ್ರವೇಶಿಸಬಾರದು ಎಂದು ನಾನು ಹೇಳುವುದಿಲ್ಲ. ಯಾರಿಗೆ ಬರಲು ಮನಸ್ಸಿದೆಯೋ ಅವರಿಗೆ ಸ್ವಾಗತ. ಆದರೆ ನೀವಿಲ್ಲಿಗೆ ಬಂದಲ್ಲಿ ಹುಲಿ ಅಥವಾ ಪುರುಷನ ಕೈಗೆ ಸಿಕ್ಕಿ ಹಾಕಿಕೊಳ್ಳಬಹುದು. ಯಾತ್ರೆಯ ಸಂದರ್ಭ ಪುರುಷರಿಂದ ದೌರ್ಜನ್ಯ ಅಥವಾ ನಿಂದನೆಗೊಳಗಾಗಿದ್ದೇನೆ ಎಂದು ದೂರಬಾರದು” ಎಂದವರು ಹೇಳಿದರು.

“ಶಬರಿಮಲೆಗೆ ಸಣ್ಣ ಪ್ರಾಯದ ಮಹಿಳೆಯರು ಪ್ರವೇಶಿಸಿದ್ದಲ್ಲಿ, ನಾನು ಥಾಯ್ ಲ್ಯಾಂಡ್ ಪ್ರವೇಶಿಸಲು ಸಿದ್ಧನಿಲ್ಲ” ಎಂದವರು ಹೇಳಿದರು ಎಂದು thenewsminute.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News