ನಟಿಗೆ ಲೈಂಗಿಕ ಕಿರುಕುಳ ಪ್ರಕರಣ: ಮೋಹನಲಾಲ್‌ಗೆ ಡಬ್ಲ್ಯುಸಿಸಿ ತರಾಟೆ

Update: 2018-10-13 17:50 GMT

ಕೊಚ್ಚಿ,ಅ.13: ಕಳೆದ ವರ್ಷ ನಡೆದಿದ್ದ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿಗಾಗಿ ಸೂಪರ್‌ಸ್ಟಾರ್ ಮೋಹನಲಾಲ್ ನೇತೃತ್ವದ ಮಲಯಾಳಂ ಚಿತ್ರ ಕಲಾವಿದರ ಸಂಘ(ಅಮ್ಮಾ)ವನ್ನು ವಿಮೆನ್ಸ್ ಕಲೆಕ್ಟಿವ್ ಇನ್ ಸಿನೆಮಾ(ಡಬ್ಲ್ಯುಸಿಸಿ) ಶನಿವಾರ ತೀವ್ರ ತರಾಟೆಗೆತ್ತಿಕೊಂಡಿದೆ.

  ಅಮ್ಮಾ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸುತ್ತಿಲ್ಲ ಎನ್ನುವುದು ಅರಿವಾದ ಬಳಿಕ ಕಳೆದ ವರ್ಷ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ದುಡಿಯುತ್ತಿರುವ ಮಹಿಳೆಯರು ತಮ್ಮ ಹೋರಾಟಕ್ಕಾಗಿ ಡಬ್ಲ್ಯುಸಿಸಿ ಅನ್ನು ರಚಿಸಿಕೊಂಡಿದ್ದರು.

ನಟಿಯ ಅಪಹರಣ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಹಿರಿಯ ನಟ ದಿಲೀಪ್ 85 ದಿನಗಳ ಕಾಲ ಜೈಲಿನಲ್ಲಿದ್ದು,ಈಗ ಜಾಮೀನಿನಲ್ಲಿ ಹೊರಗಿದ್ದಾರೆ.

ಪ್ರಕರಣದ ಸಂತ್ರಸ್ತೆಯನ್ನು ಅಮ್ಮಾ ಬೆಂಬಲಿಸಿಲ್ಲ,ಆದರೆ ದಿಲೀಪ್‌ಗೆ ಎಲ್ಲ ಬೆಂಬಲವೂ ಸಿಕ್ಕಿತ್ತು ಎಂದು ಡಬ್ಲುಸಿಸಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News