ನೀವು ಎಸ್‌ಬಿಐ ನೆಟ್ ಬ್ಯಾಂಕಿಂಗ್ ಹೊಂದಿದ್ದರೆ ಡಿ.1ರೊಳಗೆ ಈ ಕೆಲಸ ಮಾಡಿ

Update: 2018-10-14 10:57 GMT

ನೀವು ಎಸ್‌ಬಿಐನ ಇಂಟರ್‌ನೆಟ್ ಬ್ಯಾಂಕಿಂಗ್‌ನ ಬಳಕೆದಾರರಾಗಿದ್ದಲ್ಲಿ 2018,ಡಿ.1ರೊಳಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈ ಗಡುವಿನೊಳಗೆ ನೀವು ಈ ಕೆಲಸವನ್ನು ಮಾಡದಿದ್ದರೆ ಡಿ.1ರ ನಂತರ ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಯನ್ನು ಸಂಪರ್ಕಿಸಲು ನಿಮಗೆ ಸಾಧ್ಯವಾಗುವುದಿಲ್ಲ,ಅದನ್ನು ಸ್ಥಗಿತಗೊಳಿಸಲಾಗುತ್ತದೆ.

ತಮ್ಮ ಮೊಬೈಲ್ ಸಂಖ್ಯೆಗಳನ್ನು ಈಗಾಗಲೇ ನೋಂದಾಯಿಸಿರದಿದ್ದರೆ 2018,ಡಿ.1ರೊಳಗೆ ಶಾಖೆಯ ಮೂಲಕ ಅವುಗಳನ್ನು ನೋಂದಾಯಿಸಿಕೊಳ್ಳಬೇಕು,ಇಲ್ಲದಿದ್ದರೆ ಅವರ ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಸ್‌ಬಿಐ ತನ್ನ ಇಂಟರ್‌ನೆಟ್ ಬ್ಯಾಂಕಿಂಗ್ ವೆಬ್‌ಸೈಟ್ ‘ಆನ್‌ಲೈನ್‌ಎಸ್‌ಬಿಐ’ನಲ್ಲಿ ತನ್ನ ಗ್ರಾಹಕರಿಗೆ ಸೂಚಿಸಿದೆ.

ಹೀಗಾಗಿ ನೀವು ಎಸ್‌ಬಿಐ ಗ್ರಾಹಕರಾಗಿದ್ದು,ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸುತ್ತಿದ್ದರೆ ನೀವು ಸಾಧ್ಯವಾದಷ್ಟು ಶೀಘ್ರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವುದು ಒಳ್ಳೆಯದು.

ಮೊಬೈಲ್ ಸಂಖ್ಯೆಯನ್ನು ಶಾಖೆಯ ಮೂಲಕವೇ ನೋಂದಾಯಿಸಿಕೊಳ್ಳಬೇಕು ಎಂದು ವೆಬ್‌ಸೈಟ್ ಹೇಳುತ್ತಿದೆ ಎನ್ನುವುದು ನೆನಪಿರಲಿ. ಅಂದರೆ ನೀವು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲು ಶಾಖೆಗೆ ಭೇಟಿ ನೀಡುವುದು ಕಡ್ಡಾಯವಾಗಿರುವಂತಿದೆ.

ನಿಮ್ಮ ನೆಟ್-ಬ್ಯಾಂಕಿಂಗ್ ಫೆಸಿಲಿಟಿಗೆ ಲಾಗಿನ್ ಆಗುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕಿನಲ್ಲಿ ನೋಂದಣಿಯಾಗಿದೆಯೇ ಎನ್ನುವುದನ್ನೂ ನೀವು ಪರಿಶೀಲಿಸಬಹುದು. ಇದಕ್ಕಾಗಿ ಹೀಗೆ ಮಾಡಿ.......

1) www.onlinesbi.com ಗೆ ಭೇಟಿ ನೀಡಿ ಮತ್ತು ನಿಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ವಿವರಗಳನ್ನು ದಾಖಲಿಸಿ

2) ಲಾಗಿನ್ ಯಶಸ್ವಿಯಾದ ಬಳಿಕ ಹೋಮ್‌ಪೇಜ್‌ನಲ್ಲಿ ‘ಮೈ ಅಕೌಂಟ್ ಆ್ಯಂಡ್ ಪ್ರೊಫೈಲ್’ ಟ್ಯಾಬ್‌ನ ಮೇಲೆ ಕ್ಲಿಕ್ ಮಾಡಿ

3)ಈಗ ‘ಪ್ರೊಫೈಲ್’ನ ಮೇಲೆ ಕ್ಲಿಕ್ ಮಾಡಿ

4) ಪ್ರೊಫೈಲ್ ಟ್ಯಾಬ್ ತೆರೆದುಕೊಂಡ ಬಳಿಕ ‘ಪರ್ಸನಲ್ ಡಿಟೇಲ್ಸ್/ಮೊಬೈಲ್’ನ ಮೇಲೆ ಕ್ಲಿಕ್ ಮಾಡಿ

5)ಈಗ ನಿಮ್ಮ ಪ್ರೊಫೈಲ್ ಪಾಸ್‌ವರ್ಡ್ ದಾಖಲಿಸುವಂತೆ ನಿಮಗೆ ಸೂಚಿಸಲಾಗುತ್ತದೆ. ಈ ಪ್ರೊಫೈಲ್ ಪಾಸ್‌ವರ್ಡ್ ಲಾಗಿನ್ ಪಾಸ್‌ವರ್ಡ್‌ಗಿಂತ ಭಿನ್ನವಾಗಿವಿರುತ್ತದೆ ಎನ್ನುವುದು ನೆನಪಿರಲಿ

6) ಪ್ರೊಫೈಲ್ ಪಾಸ್‌ವರ್ಡ್‌ನ್ನು ಯಶಸ್ವಿಯಾಗಿ ಎಂಟರ್ ಮಾಡಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ(ಲಭ್ಯವಿದ್ದರೆ) ನಿಮಗೆ ಭಾಗಶಃ ಕಾಣಿಸುತ್ತದೆ.

ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿಯಾಗಿರದಿದ್ದರೆ ನೀವು ನಿಮ್ಮ ಹೋಮ್‌ಬ್ರಾಂಚ್‌ಗೆ ಭೇಟಿ ನೀಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News