ಅ.18ರಂದು ಜೋಕಟ್ಟೆಯಲ್ಲಿ ಸ್ವಲಾತ್ ವಾರ್ಷಿಕ

Update: 2018-10-15 08:28 GMT

ಮಂಗಳೂರು, ಅ.15: ಜೋಕಟ್ಟೆ ಈದ್ಗಾ ಮಸೀದಿಯಲ್ಲಿ ಮರ್‌ಹೂಂ ಫಖ್ರುದ್ದೀನ್ ಉಸ್ತಾದರಿಂದ ಆರಂಭಗೊಂಡ ಸ್ವಲಾತ್ ಮಜ್ಲಿಸ್‌ನ 30ನೆ ವಾರ್ಷಿಕೋತ್ಸವ ಅ.18ರಂದು ನಡೆಯಲಿದೆ ಎಂದು ಹಳೆ ಜುಮ್ಮಾ ಮಸೀದಿಯ ಅಧ್ಯಕ್ಷ ಬಿ.ಎಚ್. ಮೊಯ್ದಿನ್ ಶರೀಫ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಮಗ್ರಿಬ್ ನಮಾಜಿನ ಬಳಿಕ ಸ್ವಲಾತ್ ವಾರ್ಷಿಕ ನಡೆಯಲಿದೆ ಎಂದರು.

ಸ್ವಲಾತ್ ವಾರ್ಷಿಕದ ಅಂಗವಾಗಿ ಅ.12ರಿಂದ ಮತ ಪ್ರವಚನ ಆರಂಭಗೊಂಡಿದೆ. ಅ.16ರಂದು ಸಿದ್ದೀಕ್ ಅಝ್‌ಹಲಿ ಪಯ್ಯನ್ನೂರು ಕೇರಳ, ಅ. 17ರಂದು ಕೇರಳದ ಕೆ.ಎಸ್.ಸಿ.ಬಿ.ಸಿ. ಸದಸ್ಯ ಮಳ್ಳೂರುಕೆರೆ ಮಹಮ್ಮದಲಿ ಸಖಾಪಿಯವರಿಂದ ಧಾರ್ಮಿಕ ಪ್ರವಚನ ಹಾಗೂ ಆಹಾರ ನಾಗರಿಕ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅ. 18ರಂದು ಅಸರ್ ನಮಾಜ್ ನಂತರ ಈದ್ಗಾ ಮಸೀದಿಯ ಖತೀಬ್ ಪಿ.ಎಂ. ಅಬ್ದುಲ್ಲಾಹಿ ನಈಮಿ ಉಸ್ತಾದ್‌ರವರ ನೇತ್ವತ್ವದಲ್ಲಿ ಸ್ವಲಾತ್ ಸಂಘಟಕ ಸಂಗಮ ಮತ್ತು ದುವಾ ನಡೆಯಲಿದೆ. ಅಂದು ರಾತ್ರಿ 9 ಗಂಟೆಗೆ ಈದ್ಗಾ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯಿದ್ ನಜ್‌ಮುದ್ದೀನ್ ತಂಙಳ್, ಅಲ್ ಹೈದ್ರೋಸಿ, ಅಲ್ ಖಾದರಿ, ಅಲ್ ಯಮಾನಿ ಕೇರಳ ಇವರಿಂದ ದುವಾ ಮತ್ತು ಆಶೀರ್ವಚನ ನಡೆಯಲಿದೆ.

ಹಳೆ ಮಸೀದಿಯ ಖತೀಬ್ ಕೆ.ಎಂ. ಉಸ್ಮಾನ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸುವರು. ಹಾಜಿ ಇ.ಎಂ. ಅಬ್ದುರ್ರಹ್ಮಾನ್ ದಾರಿಮಿ, ಪಿ.ಎಂ. ಅಬ್ದುಲ್ಲಾಹಿ ನಈಮಿ, ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಮಂಗಳೂರು ತಾ.ಪಂ. ಅಧ್ಯಕ್ಷ ಯು.ಕೆ. ಮೋನು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅ. 18ರಂದು ಅಸ್ ನಮಾಜಿನ ಬಳಿಕ ಕೂಟು ಝಿಯಾರತ್ ನಡೆಯಲಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಈದ್ಗಾ ಜುಮಾ ಮಸೀದಿಯ ಖತೀಬ್ ಪಿ.ಎಂ. ಅಬ್ದುಲ್ಲಾಹಿ ನಈಮಿ, ಹಳೆ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹೈದರ್ ಹಬೀಬ್ ರೆಹ್ಮಾನ್, ಸ್ವಲಾತ್ ಸಮಿತಿಯ ಸಂಚಾಲಕ ಟಿ.ಎ. ಮುಹಮ್ಮದ್ ನಾಸಿರ್, ಉಪಾಧ್ಯಕ್ಷ ಅಮೀರ್ ಖಾಸಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News