ಯುವಜನೋತ್ಸವ: ಮಂಗಳೂರು ವಿವಿಗೆ ಆರು ಬಹುಮಾನ

Update: 2018-10-15 09:45 GMT

ಮಂಗಳೂರು, ಅ.15: ತಿರುಪತಿಯ ಪದ್ಮಾವತಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ 34ನೆ ದಕ್ಷಿಣ ವಲಯ ಯುವ ಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟ ಕಾಲೇಜು ವಿದ್ಯಾರ್ಥಿಗಳು ಆರು ಬಹಮಾನಗಳನ್ನು ಪಡೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಪ್ರೊ. ಬಾರ್ಕೂರು ಉದಯ್, ಯುವಜನೋತ್ಸವದ ಜನಪದ ನೃತ್ಯದಲ್ಲಿ ಪ್ರಥಮ, ನಾಟಕ ಮತ್ತು ಪ್ರಹಸನ ಸ್ಪರ್ಧೆಗಳಲ್ಲಿ ತೃತೀಯ, ಸಮೂಹ ಗಾಯನ, ಶಾಸ್ಚ್ರೀಯ ಗಾಯನ, ಜನಪದ ರಸಮಂಜರಿ ಸ್ಪರ್ಧೆಯಲ್ಲಿ ನಾಲ್ಕನೆ ಸ್ಥಾನವನ್ನು ಗಳಿಸಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರಕಿಸಿದ್ದಾರೆ ಎಂದರು.

ಆಳ್ವಾಸ್ ಕಾಲೇಜಿನ 27 ವಿದ್ಯಾರ್ಥಿಗಳು, ಸುರತ್ಕಲ್ ಗೋವಿಂದಾಸ್ ಕಾಲೇಜಿನ 12 ವಿದ್ಯಾರ್ಥಿಗಳು, ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳು ಚಂಡೀಗಢದಲ್ಲಿ 2019ರ ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹತೆ ಪೆದಿದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಉಪನ್ಯಾಸಕ ಗುರುಪ್ರಸಾದ್, ಮಂಗಳೂರು ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ನಾಯಕ್, ವಿವಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಹರ್ಷಿತ್ ಪಡ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News