ಅಮಲು ಪದಾರ್ಥ ನೀಡಿ ಮಹಿಳೆಯ ಅತ್ಯಾಚಾರಗೈದ ಸಹೋದ್ಯೋಗಿಗಳು

Update: 2018-10-15 14:19 GMT

ಹೊಸದಿಲ್ಲಿ,ಅ.15: ತನ್ನ ಮೇಲೆ ಇಬ್ಬರು ಸಹೋದ್ಯೋಗಿಗಳು ಅತ್ಯಾಚಾರ ನಡೆಸಿದ್ದಾರೆ ಎಂದು ಬಹುರಾಷ್ಟ್ರೀಯ ಕಂಪೆನಿಯೊಂದರ ಮಹಿಳಾ ಉದ್ಯೋಗಿ ಆರೋಪಿಸಿದ್ದು, ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

“ನಾನು ಶನಿವಾರ ರಾತ್ರಿ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಇಬ್ಬರು ಸಹೋದ್ಯೋಗಿಗಳು ನನ್ನನ್ನು ಅವರ ಕಾರಿನಲ್ಲಿ ಬರುವಂತೆ ತಿಳಿಸಿದರು. ಕಾರಿನಲ್ಲಿ ಕುಳಿತ ನಂತರ ಅವರು ನನಗೆ ಕುಡಿಯಲು ಜ್ಯೂಸ್ ನೀಡಿದರು. ಅದನ್ನು ಕುಡಿದ ಕೆಲವೇ ನಿಮಿಷದಲ್ಲಿ ನಾನು ಪ್ರಜ್ಞೆ ತಪ್ಪಿದ್ದೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯನ್ನು ಫ್ಲಾಟ್‌ವೊಂದಕ್ಕೆ ಕರೆದೊಯ್ದ ಆರೋಪಿಗಳು ಆಕೆಯ ಮೇಲೆ ಸರಣಿ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆಯನ್ನು ವಸಂತ್ ಕುಂಜ್ ಬಳಿ ಬಿಟ್ಟು ತೆರಳಿದ್ದಾರೆ. ದ್ವಾರಕಾದಲ್ಲಿರುವ ತನ್ನ ಮನೆಗೆ ತಲುಪಿದ ಮಹಿಳೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ದೂರಿನ ಆಧಾರದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಅವರ ವೈದ್ಯಕೀಯ ಪರೀಕ್ಷೆಯ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News