2018ರ ಸಾಲಿನ ರಚನಾ ಪ್ರಶಸ್ತಿ ಪ್ರಕಟ

Update: 2018-10-16 06:46 GMT

ಮಂಗಳೂರು, ಅ.16: ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧೀನದ ರಚನಾ ಸಂಸ್ಥೆಯು ಕಥೊಲಿಕ್ ಸಮಾಜದ ಸಾಧಕರಿಗೆ ನೀಡುವ 2018ನೇ ಸಾಲಿನ ರಚನಾ ಪ್ರಶಸ್ತಿಯನ್ನು ಘೋಷಿಸಿದೆ.

ಈ ಬಾರಿ ಪ್ರಶಸ್ತಿಯನ್ನು ಐವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸ್ಟಾನಿ ಅಲ್ವಾರಿಸ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ರಚನಾ ಕೃಷಿಕ ಪ್ರಶಸ್ತಿಗೆ ಲಾರೆನ್ಸ್ ಪಿಂಟೊ, ರಚನಾ ಉದ್ಯಮಿ ಪ್ರಶಸ್ತಿಗೆ ರೊನಾಲ್ಡ್ ಕ್ಯಾಸ್ತಲಿನೊ, ರಚನಾ ವೃತ್ತಿಪರ ಪ್ರಶಸ್ತಿಗೆ ಫೇ ಡಿಸೋಜ, ರಚನಾ ಅನಿವಾಸಿ ಉದ್ಯಮಿ/ ವೃತ್ತಿಪರ ಪ್ರಶಸ್ತಿಗೆ ಅಲೋಶಿಯಸ್ ರಿಚರ್ಡ್ ಲೋಬೊ ಹಾಗೂ ರಚನಾ ಮಹಿಳಾ ಪ್ರಶಸ್ತಿ - ಸಿ. ಮರಿಯಾ ಜ್ಯೋತಿ ಎ.ಸಿ. ಆಯ್ಕೆಯಾಗಿದ್ದಾರೆ ಎಂದು ಅವರು ವಿವರಿಸಿದರು.

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನವೆಂಬರ್ 17ರಂದು ಸಂಜೆ 6 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಜ್ಯುಬಿಲಿ ಸಭಾಭವನದಲ್ಲಿ ನಡೆಯಲಿದೆ. ಮಂಗಳೂರು ಬಿಷಪ್ ಅತೀ ವಂ.ಪೀಟರ್ ಪಾವ್ಲ್ ಸಲ್ಡಾನ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರ್ಕಲ್‌ನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊ ಮುಖ್ಯ ಅತಿಥಿಯಾಗಿ ಮತ್ತು ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೊ ಗೌರವ ಅತಿಥಿಯಾಗಿ ಭಾಗವಹಿಸುವರು ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಲಿಯಾಸ್ ಸಾಂಕ್ತಿಸ್, ಪ್ರಶಸ್ತಿ ಸಮಿತಿಯ ಸಂಚಾಲಕ ಜೋನ್ ಬಿ. ಮೊಂತೇರೊ, ಕಾರ್ಯದರ್ಶಿ ಅನಿಲ್ ವಾಸ್, ಹಾಗೂ ಖಜಾಂಚಿ ಫೆಲಿಕ್ಸ್ ಜೆ. ಪಿಂಟೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News