ಶಿರ್ವ: ರಕ್ಷಣಾ ವಲಯದಲ್ಲಿನ ಉದ್ಯೋಗ ಅವಕಾಶಗಳ ಕುರಿತು ಕಾರ್ಯಾಗಾರ

Update: 2018-10-16 12:15 GMT

ಶಿರ್ವ, ಅ.16: ಎಸ್‌ಎಂವಿಐಟಿಎಂ ಮಹಾವಿದ್ಯಾಲಯದ ಉದ್ಯೋಗ ಮತ್ತು ತರಬೇತಿ ವಿಭಾಗ ಹಾಗೂ ಐಎಸ್‌ಟಿಇ ವಿದ್ಯಾರ್ಥಿ ಘಟಕದ ಸಹ ಯೋಗದೊಂದಿಗೆ ರಕ್ಷಣಾ ವಲಯದಲ್ಲಿನ ಉದ್ಯೋಗ ಅವಕಾಶಗಳ ಕುರಿತ ಕಾರ್ಯಾಗಾರವನ್ನು ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಭಾರತೀಯ ವಾಯುಪಡೆಯ ನಿವೃತ್ತ ಸ್ಕ್ವಾಡ್ರನ್ ಲೀಡರ್ ನವೀನ್ ಅಮ್ಮಣ್ಣ, ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ರಕ್ಷಣಾ ವಲಯದಲ್ಲಿ ಇಂಜಿನಿಯರ್ ಗಳ ಪಾತ್ರ ಮಹತ್ತರವಾಗಿದೆ. ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವ ಇಂಜಿನಿಯರ್‌ಗಳು ಸಂವಹನ, ತಂಡ ಪರಿಶ್ರಮ ಹಾಗೂ ತೀವ್ರವಾದ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದರು.

ಮೂರನೇ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಯಾಂತ್ರಿಕ ವಿಭಾಗದ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಸಂವಾದ ನಡೆಸಿ ದರು. ಯಾಂತ್ರಿಕ ಇಂಜಿನಿಯರಿಗ್ ವಿಭಾಗದ ಮುಖ್ಯಸ್ಥ ಡಾ.ಸುದರ್ಶನ್ ರಾವ್ ಕೆ., ಕಾರ್ಯಾಗಾರದ ಆಯೋಜಕ ಲಿಂಗರಾಜ ರಿತ್ತಿ ಉಪಸ್ಥಿತರಿದ್ದರು.

ಮೆಕ್ಯಾನಿಕಲ್ ಇಂಜಿನಿಯರಿಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ವಿ. ಸ್ವಾಗತಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News