ಸಾಂಬಾದಲ್ಲಿ ಯೋಧ ಆತ್ಮಹತ್ಯೆ

Update: 2018-10-16 15:19 GMT

ಜಮ್ಮು,ಅ.16: ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಬಾರಿ ಬ್ರಾಹ್ಮಣ ಪ್ರದೇಶದಲ್ಲಿ ಯೋಧನೋರ್ವ ಸೋಮವಾರ ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇಪಾಳ ನಿವಾಸಿ ಸಿಪಾಯಿ ಬಹಾದೂರ ಥಾಪಾ ಮಗೇರ್(19) ಶಿಬಿರದಲ್ಲಿ ಕಾವಲು ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಗುಂಡಿನ ಶಬ್ದ ಕೇಳಿ ಥಾಪಾನ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿದ್ದರಾದರೂ ಆ ವೇಳೆಗಾಗಲೆ ಆತ ಮೃತಪಟ್ಟಿದ್ದ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News