​ಅ.19: ಬಿರುವೆರ್ ಕುಡ್ಲದಿಂದ ನಾಲ್ಕನೆ ವಾರ್ಷಿಕ ಶಾರದಾ ಹುಲಿವೇಷ

Update: 2018-10-17 12:20 GMT

ಮಂಗಳೂರು, ಅ.17: ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಆಶ್ರಯದಲ್ಲಿ ನಡೆಯುವ ಮಂಗಳೂರು ದಸರಾ ಮೆರವಣಿಗೆಗೆ ಫ್ರೆಂಡ್ಸ್ ಬಳ್ಳಾಲ್‌ಬಾಗ್ ಬಿರುವೆರ್ ಕುಡ್ಲ ವತಿಯಿಂದ ನಾಲ್ಕನೆ ವಾರ್ಷಿಕ ಶಾರದಾ ಹುಲಿವೇಷವು ಅ.19ರಂದು ನಡೆಯಲಿದೆ ಎಂದು ಬಿರುವೆರ್ ಕುಡ್ಲದ ವಕ್ತಾರ ದಿನೇಶ್ ರಾಯಿ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಅ.18ರಂದು ಸಂಜೆ 4ಕ್ಕೆ ಹುಲಿವೇಷದ ಊದು ಹಾಕುವ ಕಾರ್ಯಕ್ರಮವಿದೆ. ಅಂದು ಸಂಜೆ 6ಕ್ಕೆ ಜಂಡೆ ಮೆರವಣಿಗೆ ನಡೆಯಲಿದೆ. ಅ.19ರಂದು ಅಪರಾಹ್ನ 2:30ಕ್ಕೆ ಬಳ್ಳಾಲ್‌ಬಾಗ್ ಸರ್ಕಲ್‌ನ ಎದುರುಗಡೆ ಭವ್ಯ ರಂಗಮಂಟಪದಲ್ಲಿ ಹುಲಿವೇಷಧಾರಿಗಳ ಕುಣಿತವಿದೆ. ಇಲ್ಲಿ ಸುಮಾರು 15 ಲಕ್ಷ ರೂ. ಸಂಗ್ರಹಿಸುವ ಗುರಿ ಹೊಂದಿದ್ದು, ಈ ಹಣವನ್ನು ಅನಾರೋಗ್ಯಪೀಡಿತ 25 ಕುಟುಂಬಗಳಿಗೆ ಹಂಚುವ ಉದ್ದೇಶ ಹೊಂದಲಾಗಿದೆ ಎಂದರು.

6 ವರ್ಣರಂಜಿತ ಟ್ಯಾಬ್ಲೋ: ಈ ಬಾರಿಯ ಮಂಗಳೂರು ದಸರಾ ಉತ್ಸವದಲ್ಲಿ 6 ವರ್ಣರಂಜಿತ ಟ್ಯಾಬ್ಲೋಗಳು ಮನರಂಜನೆ ನೀಡಲಿದೆ.
2015ರ ಮಾರ್ಚ್ 15ರಂದು ಸ್ಥಾಪಿಸಲ್ಪಟ್ಟ ಬಿರುವೆರ್ ಕುಡ್ಲವು ಕಳೆದ ನಾಲ್ಕು ವರ್ಷದಿಂದ ಸಾಮಾಜಿಕ, ಧಾರ್ಮಿಕ, ಕ್ರೀಡಾವಲಯದಲ್ಲಿ ಸಕ್ರಿಯವಾಗಿದೆ. ದ.ಕ.ಜಿಲ್ಲೆಯಲ್ಲದೆ ದುಬೈ, ಮುಂಬೈಯಲ್ಲೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿವೆ. ಜಿಲ್ಲೆಯಲ್ಲಿ ಬಜ್ಪೆ, ಮೂಡುಬಿದಿೆ, ಬಂಟ್ವಾಳ, ಕೊಂಚಾಡಿ, ಅಸೈಗೋಳಿ, ಸಿದ್ಧಕಟ್ಟೆ, ಬೆಳ್ತಂಗಡಿ, ಕೋಡಿಕಲ್, ಜೆಪ್ಪು, ಮುಲ್ಕಿ ಸಹಿತ 14 ಘಟಕಗಳೂ ಸಕ್ರಿಯವಾಗಿದೆ. ಸಂಸ್ಥೆಯು ಪ್ರತೀ ತಿಂಗಳು ಅರ್ಹ ಅನಾರೋಗ್ಯ ಪೀಡಿತರಿಗೆ ಸುಮಾರು 50 ಸಾವಿರದಿಂದ 1 ಲಕ್ಷ ರೂ.ವರೆಗೆ ನೆರವು ನೀಡು್ತಾ ಬಂದಿದೆ. ಈವರೆಗೆ 90 ಲಕ್ಷ ರೂ.ವರೆಗೆ ನೆರವು ನೀಡಿದೆ. ಅಲ್ಲದೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುತ್ತಾ ಬಂದಿವೆ. ಕಳೆದ ಬಾರಿ ಬಳ್ಳಾಲ್‌ಬಾಗ್‌ನಲ್ಲಿ ನಿರ್ಮಿಸಲಾದ ಸುಸಜ್ಜಿತ ವೇದಿಕೆಯಲ್ಲಿ ಹುಲಿವೇಷ ನಡೆಸಿ ಸಂಗ್ರಹಿಸಲಾದ 4 ಲಕ್ಷ ರೂ.ವನ್ನು ಅರ್ಹರಿಗೆ ಸ್ಥಳದಲ್ಲೇ ಹಸ್ತಾಂತರಿಸಿದೆ ಎಂದು ದಿನೇಶ್ ರಾಯಿ ಹೇಳಿದರು.

ಡಿ.2: ಫ್ರೆಂಡ್ಸ್ ಬಳ್ಳಾಲ್‌ಬಾಗ್, ಬಿರುವೆರ್ ಕುಡ್ಲ, ಮಹಿಳಾ ವೇದಿಕೆಯ ವತಿಯಿಂದ ಡಿ.2ರಂದು ಕುದ್ರೋಳಿ ದೇವಸ್ಥಾನದಲ್ಲಿ ಹಿಂದೂ ಧರ್ಮಕ್ಕೆ ಸೇರಿದ 10 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ನ.10ರೊಳಗೆ ಇದಕ್ಕೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ, ಅಧ್ಯಕ್ಷ ರಾಕೇಶ್ ಪೂಜಾರಿ, ಮಹಿಳಾ ವೇದಿಕೆಯ ಅಧ್ಯಕ್ಷ ವಿ್ಯಾರಾಕೇಶ್, ಪ್ರಧಾನ ಕಾರ್ಯದರ್ಶಿ ಕಿಶೋರ್ ಬಾಬು, ವಕ್ತಾರ ದೀಪು ಶೆಟ್ಟಿಗಾರ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News