ಯೆನೆಪೊಯ: 'ಮೆಡಿಕಲ್ ಆರ್ಟ್ ಗ್ಯಾಲರಿ ಪ್ರದರ್ಶನ' ಉದ್ಘಾಟನೆ

Update: 2018-10-17 12:43 GMT

ಉಳ್ಳಾಲ, ಅ. 17:  ಮನುಷ್ಯನ ಜೀವನದ ಪ್ರತಿಯೊಂದು ಕ್ಷಣಗಳಲ್ಲಿ ಕಲೆಯು ನೆಲೆಯಾಗಿದೆ. ಬದುಕು,  ಆಲೋಚನೆಗಳು ಎಲ್ಲದರಲ್ಲಿಯೂ ಕಲೆಯು ಸಮ್ಮಿಲಿತವಾಗಿರುತ್ತದೆ.  ಪ್ರತಿಯೊಂದು ಕಲೆಯಲ್ಲಿಯೂ ವಿಜ್ಞಾನವಿದೆ. ಹಾಗೆಯೇ ವಿಜ್ಞಾನದಲ್ಲಿಯೂ ಕಲೆ ಇರುವುದನ್ನು ನಾವು ಗಮನಿಸಬಹುದು.  ಇದನ್ನು  ಸಾಧನೆಯ ಮೂಲಕ ತೋರಿಸುವಂತಹ ಕೆಲಸ  ಗ್ರೂಪ್ ಏಸ್ತೇಟ್ ನಿಂದ ಆಗಿದೆ ಎಂದು  ಯೆನೆಪೊಯ ಸ್ವಾಯುತ್ತೆ ಆಗಲಿರುವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ ವಿಜಯಕುಮಾರ್  ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ  ಯೆನೆಪೊಯ  ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾಲಯದ  ಯೆಂಡ್ಯುರೆನ್ಸ್ ಝೋನ್ ನಲ್ಲಿ `'ಗ್ರೂಪ್ ಏಸ್ತೇಟ್ ಮೆಡಿಕಲ್  ಆರ್ಟ್ ಗ್ಯಾಲರಿ' ಡಾ.ಅಖ್ತರ್ ಹುಸೈನ್ ಇವರ ಕಲಾಕುಂಚದಲ್ಲಿ ಮೂಡಿ ಬಂದ ವೈದ್ಯಕೀಯ ವಿಜ್ಞಾನದ ಕಲಾಕೃತಿಗಳ  ಗ್ಯಾಲರಿಯ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಚಿತ್ರ ಗ್ಯಾಲರಿ ಪ್ರದರ್ಶನವನ್ನು ನಸ್ರೀನ್ ಅಬ್ದುಲ್ಲಾ  ಕುಂಞಿ ಯೆನೆಪೊಯ  ಉದ್ಘಾಟಿಸಿದರು. 

ಗ್ರೂಪ್ ಏಸ್ತೇಟ್  ಇದರ ಮುಖ್ಯಸ್ಥ ಡಾ. ಅಖ್ತರ್ ಹುಸೈನ್ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಪುಸ್ತಕಗಳಿಗಿಂತ ಚಿತ್ರಗಳು ಆಕರ್ಷಕವಾಗಿರುತ್ತದೆ.  ವೈದ್ಯಕೀಯ ಕಲೆಯನ್ನು ರಚಿಸಿರುವ ಮೂಲಕ ಯುವ ವೈದ್ಯರಿಗೆ ಸುಲಭವಾಗಿ ಪಾಠಕ್ಕಿಂತ ಚಿತ್ರಗಳು ಅರ್ಥವಾಗುವುದು. ವಿಶ್ವವಿದ್ಯಾಲಯಗಳಲ್ಲಿ ಇಂತಹ ಆರ್ಟ್ ಗ್ಯಾಲರಿಗಳು ಅನನ್ಯ. ವಿದ್ಯಾರ್ಥಿಗಳು ಕೌಶಲ್ಯವೃದ್ಧಿಗೆ ಕಲೆಯೂ ಒಂದು ಸಾಧನ. ಇದನ್ನು  ಬೆಳೆಸುವ, ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಹೊರತರುವ ಕೆಲಸ  ಗ್ರೂಪ್ ಏಸ್ತೇಟ್ ನಿಂದ ಆಗಲಿದೆ ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಝ್ನೀನ್ ಯೆನೆಪೊಯ ಅಬ್ದುಲ್ಲಾ ಕುಂಞಿ ಮಾತನಾಡಿ,  ಪ್ರತಿಯೊಬ್ಬರಲ್ಲೂ ಕಲೆ ಅಡಕವಾಗಿರುತ್ತದೆ.  ಇದನ್ನು ಹೊರಚೆಲ್ಲಲು ಮತ್ತು ಕೌಶಲ್ಯವೃದ್ಧಿಯನ್ನು  ಬೆಳೆಸುವ ಮೂಲಕ ವಿದ್ಯಾರ್ಥಿಗಳ ಚಿಂತನೆಗಳಲ್ಲಿ ಕಲೆಯ ಗೌರವ ಹೆಚ್ಚಾಗಲಿ ಎಂದು ಹಾರೈಸಿದರು. 
ಕುಲಸಚಿವ ಡಾ. ಗಂಗಾಧರ ಸೋಮಯಾಜಿ  ಉಪಸ್ಥಿತರಿದ್ದರು.

ಮೆಡಿಕಲ್ ಆರ್ಟ್ ಗ್ಯಾಲರಿ ಪ್ರದರ್ಶನದಲ್ಲಿ ಡಾ. ಅಖ್ತರ್ ಹುಸೈನ್ ಅವರು ರಚಿಸಿದ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಮಾದರಿಗಳ ಚಿತ್ರಕಲೆಯು ಪ್ರೇಕ್ಷಕರ ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News