'ಇಂಝಿ ಕನೆಕ್ಟ್' ಸ್ಪರ್ಧೆಯಲ್ಲಿ ಆಳ್ವಾಸ್‍ಗೆ ಪ್ರಶಸ್ತಿ

Update: 2018-10-17 13:04 GMT

ಮೂಡುಬಿದಿರೆ, ಅ.17: ಸುರತ್ಕಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ "ಇಂಝಿ ಕನೆಕ್ಟ್" ವೈಜ್ಞಾನಿಕ ಮಾದರಿ ಮತ್ತು ಪ್ರದರ್ಶನ ಸ್ಫರ್ಧೆಯಲ್ಲಿ ಆಳ್ವಾಸ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. 

ದ್ವಿತೀಯ ಪಿ.ಯು.ಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ  ವಾಗೇಶ್ ಪಿ, ವಿಜಯ್ ಎಮ್. ಜಿ, ಓಂಕಾರ್ ವಿ. ಎನ್ ತಯಾರಿಸಿದ ಸರಳ ಮತ್ತು ಕಡಿಮೆ ಬಜೆಟ್‍ನ ವೈಜ್ಞಾನಿಕ ಮಾದರಿ "ಮಿನಿಮೈಕ್ರೋಸ್ಕೋಪ್"ಗೆ ಪ್ರಥಮ ಬಹುಮಾನ,  ಅಭಿರಾಮ ಬಿ. ಎಲ್, ರಘುರಾಮ ಬಿ, ಎಲ್, ರಘು ವಿ, ಹೇಮಂತ್ ಕುಮಾರ್. ಸಿ ತಯಾರಿಸಿದ ವ್ಯಜ್ಞಾನಿಕ ಮಾದರಿ "ಏಕಾಗ್ರ"ಕ್ಕೆ ದ್ವಿತೀಯ ಬಹುಮಾನವನ್ನು ಗಳಿಸಿದ್ದಾರೆ.

ಮಾದರಿಗಳನ್ನು ತಯಾರಿಸಲು ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥ ಪ್ರೊ. ಶ್ಯಾಮ್ ಪ್ರಸಾದ್ ಮತ್ತು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೀತಮ್  ಕ್ಯಾಸ್ಟೆಲಿನೋ ಮಾರ್ಗದರ್ಶನ ನೀಡಿದ್ದರು.

ಬಹುಮಾನ ವಿಜೇತರಿಗೆ  ಸುರತ್ಕಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಟರ್ನ್‍ಶಿಪ್ ಮಾಡುವ ಅವಕಾಶ ದೊರಕಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News