ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದಿಂದ ಕರಾಳ ದಿನ ಆಚರಣೆ

Update: 2018-10-17 16:49 GMT

ಮಂಗಳೂರು, ಅ.17: ದ.ಕ. ಜಿಲ್ಲೆಯ ಶಾಲಾ- ಕಾಲೇಜುಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರಕಾರವು ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದಿಂದ ಜಿಲ್ಲಾದ್ಯಂತ ವಿವಿಧ ಕಾಲೇಜುಗಳಲ್ಲಿ ಕರಾಳ ದಿನ ಆಚರಿಸಲಾಯಿತು.

ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಆಳ್ವಾಸ್ ಮತ್ತು ಎಕ್ಸ್‌ಪರ್ಟ್ ಕಾಲೇಜುಗಳನ್ನೊಳಗೊಂಡ ವಿವಿಧ ಕಾಲೇಜುಗಳಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳು ಜಿಲ್ಲೆ ಯನ್ನು ತಲೆತಗ್ಗಿಸುವಂತೆ ಮಾಡಿವೆ. ಆದರೆ ಈ ಎಲ್ಲ ಘಟನೆಗಳು ನಡೆದರೂ ಸರಕಾರವಾಗಲೀ ಸಂಬಂಧಪಟ್ಟ ಇಲಾಖೆಗಳಾಗಲಿ ಜಿಲ್ಲೆಯ ಬಗ್ಗೆ ಗಮ ನವಹಿಸದಿರುವುದು ಖಂಡನಾರ್ಹ.

ಈ ನಿಟ್ಟಿನಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟವು ಎಲ್ಲ ಆತ್ಮಹತ್ಯೆ ಪ್ರಕರಣಗಳನ್ನು ವಿಶೇಷವಾಗಿ ತನಿಖೆ ನಡೆಸಲು ಒತ್ತಾಯಿಸಿ ಸಲಹೆಗಾರ ಫಯಾಝ್ ದೊಡ್ಡಮನೆ ನಿರ್ದೇಶನದಂತೆ ಬುಧವಾರ ಜಿಲ್ಲೆಯ ಎಸ್‌ಡಿಎಂ, ಬದ್ರಿಯಾ ಕಾಲೇಜು, ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರು, ಸರಕಾರಿ ಕಾಲೇಜು ಉಪ್ಪಿನಂಗಡಿ, ವಿಶ್ವವಿದ್ಯಾನಿಲಯ ಕೊಣಾಜೆ, ಎಂ.ವಿ. ಶೆಟ್ಟಿ ಕಾಲೇಜು ಕಾವೂರು, ಎಸ್‌ಡಿಎಂ ಉಜಿರೆ ಮುಂತಾದ ಕಡೆಗಳಲ್ಲಿ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನೇತೃತ್ವವನ್ನು ಒಕ್ಕೂಟದ ಅಧ್ಯಕ್ಷ ಸೈಯದ್ ಅಫ್ರೀದ್ ವಹಿಸಿದ್ದರು. ಉಪಾಧ್ಯಕ್ಷರಾದ ತಾಜುದ್ದೀನ್ ಶಿಹಾಬುದ್ದೀನ್, ನೌಫಲ್ ಹಾಗೂ ಕಾರ್ಯದರ್ಶಿ ಅಬ್ದುಲ್ ಖಾದರ್, ನಗರ ಉಪಾಧ್ಯಕ್ಷ ಅಬ್ದುಲ್ ಬಾಸಿತ್, ಮುಖಂಡರಾದ ಶಫೀಕ್ ಕೋಡಿ, ಹಫೀಝ್, ಗರೀಬ್ ನವಾಝ್, ಆಸಿಫ್ ಸಾಬಿತ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News