ಟ್ರಾಫಿಕ್ ಗೊಂದಲಗಳನ್ನು ಸರಿಪಡಿಸಿ

Update: 2018-10-17 18:32 GMT

ಮಾನ್ಯರೇ,

ಅತ್ತಾವರದ ಬಿಗ್ ಬಝಾರ್‌ನಿಂದ ರೈಲ್ವೆ ಸ್ಟೇಷನ್, ಪುರಭವನದ ಕಡೆ ಹೋಗುವ ರಸ್ತೆಯು ವಾಹನಗಳ ಸಂಚಾರ ದಟ್ಟಣೆಯಿಂದ ತುಂಬಾ ಅಸ್ತವ್ಯಸ್ತವಾಗುತ್ತಾ ಬರುತ್ತಿದೆ. ಹೀಗಾಗಿ ಈ ರಸ್ತೆಯಲ್ಲಿ ದಿನೇ ದಿನೇ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ. ಇಲ್ಲಿ ಎಲ್ಲರಿಗೂ ಅವಸರ, ಎಲ್ಲರೂ ವಾಹನಗಳನ್ನು ನುಗ್ಗಿಸುವವರೇ. ಹಾಗಾಗಿ ಎರಡನೇ ರೈಲ್ವೆ ಗೇಟಿನಲ್ಲಿ ಪ್ರತೀದಿನ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ಅಡಚಣೆ ಉಂಟಾಗುತ್ತದೆ. ಪಾದಚಾರಿಗಳು ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರಿಕರು ಈ ವಠಾರದಲ್ಲಿ ನೆಮ್ಮದಿಯಾಗಿ ನಡೆದಾಡುವಂತಿಲ್ಲ.

ಮೊದಲನೇ ರೈಲ್ವೆ ಗೇಟ್ ಮುಖ್ಯ ಗೇಟ್ ಜಂಕ್ಷನ್‌ನಲ್ಲಿ ಕೂಡಾ ಇದೇ ಗೋಳು. ರೈಲು ಬಂದು ಹೋಗುವ ವೇಳೆ ಈ ವಠಾರದಲ್ಲಿ ಸದಾ ಗಜಿಬಿಜಿ ವಾತಾವರಣ. ಮೊದಲನೇ ಗೇಟಿನಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಅಗಲ ತುಂಬಾ ಕಿರಿದಾದರೂ, ಇಲ್ಲಿ ಎಡಬದಿಯಲ್ಲಿ ಆಟೊರಿಕ್ಷಾಗಳ ಸಾಲುಗಳಿವೆ. ಹೀಗಾಗಿ ಟ್ರಾಫಿಕ್ ಜಾಮ್ ಸಾಮಾನ್ಯ. ಸಂಬಂಧಿತ ಇಲಾಖೆಯವರು ಇಲ್ಲಿ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರನ್ನು ನಿಯೋಜಿಸಿದರೆ ತಕ್ಕಮಟ್ಟಿಗಾದರೂ ಈ ಸಮಸ್ಯೆಗೆ ಪರಿಹಾರ ಸಿಗಬಹುದು. ಇಲ್ಲದಿದ್ದರೆ ಜನಸಾಮಾನ್ಯರಿಗೆ ತೊಂದರೆ ತಪ್ಪಿದ್ದಲ್ಲ. ಇಂತಹ ಸಮಸ್ಯೆಗಳನ್ನು ದಿನನಿತ್ಯ ನೋಡಿ, ಅನುಭವಿಸುವಾಗ ‘ಸ್ಮಾರ್ಟ್ ಸಿಟಿ’ ಎಂದರೆ ಇದೇನಾ ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ ಮೂಡುವುದರಲ್ಲಿ ಆಶ್ಚರ್ಯವೇನಿಲ್ಲ.

Writer - -ಜೆ. ಎಫ್. ಡಿ’ಸೋಜ, ಅತ್ತಾವರ

contributor

Editor - -ಜೆ. ಎಫ್. ಡಿ’ಸೋಜ, ಅತ್ತಾವರ

contributor

Similar News