ಪಯ್ಯನ್ನೂರ್: ಅ.19ರಿಂದ ಅಝ್ಹರಿಯಾ ಸಮ್ಮೇಳನ

Update: 2018-10-19 17:06 GMT

ಮಂಗಳೂರು, ಅ. 19: ಪಯ್ಯನ್ನೂರ್ ಜಾಮಿಯ ಅಝ್ಹರಿಯ್ಯ ಹದಿನೈದನೇ ವಾರ್ಷಿಕ ಮತ್ತು ಆರನೇ  ಸನದು ದಾನ ಮಹಾ ಸಮ್ಮೇಳನ  ಅ. 19, 20 ಮತ್ತು 21ರಂದು ಪಯ್ಯನ್ನೂರ್ ಅಝ್ಹರಿಯ ಸಮೀಪದ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ.

ಅ. 21ರಂದು ಸಂಜೆ 6:30 ಕ್ಕೆ ಸಮಾರೋಪ ಸಮಾರಂಭವು ನಡೆಯಲಿದ್ದು, ಸಮಸ್ತ ವಿದ್ಯಾಭ್ಯಾಸ ಮಂಡಳಿ ಅಧ್ಯಕ್ಷ ಪಿ.ಕೆ.ಪಿ. ಅಬ್ದುಲ್ ಸಲಾಂ ಮುಸ್ಲಿಯಾರ್ ಪ್ರಾರ್ಥನೆಯೊಂದಿಗೆ ಅಝ್ಹರಿಯಾ ಕಾಲೇಜಿನ ಅಧ್ಯಕ್ಷ ಕೆ.ಪಿ.ಪಿ. ತಂಙಳ್ ಅಲ್ ಬುಖಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಮಾರಂಭದ ಉದ್ಘಾಟನೆಯನ್ನು ಸೈಯದ್ ಸ್ವಾದಿಕ್ ಅಲೀ ಶಿಹಾಬ್ ತಂಙಳ್ ಪಾಣಕ್ಕಾಡ್ ನಿರ್ವಹಿಸಲಿದ್ದಾರೆ. ಸನದು ವಿತರಣೆ ಮತ್ತು ಪ್ರಭಾಷಣ ಸಮಸ್ತ ಅಧ್ಯಕ್ಷ ಸೈಯದುಲ್ ಉಲಮಾ ಜಿಫ್ರಿ ಮುತ್ತುಕ್ಕೋಯ ತಂಙಳ್ ನಿರ್ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುನಾ ಪ್ರೊ. ಕೆ. ಆಲಿಕ್ಕುಟ್ಟಿ ಉಸ್ತಾದ್ ಭಾಗವಹಿಸಲಿದ್ದಾರೆ.

ಜಾಮಿಯ ಅಝ್ಹರಿಯ್ಯ ಪ್ರಿನ್ಸಿಪಾಲ್ ಶೈಖುನಾ ಪಿ.ಕೆ. ಅಬೂಬಕರ್ ಫೈಝಿ ಕಾಲೇಜಿನ ಸಂದೇಶ ಭಾಷಣ ಮಾಡಲಿದ್ದಾರೆ. ಮುಖ್ಯ ಪ್ರಭಾಷಣ  ಅಬ್ದುಲ್ ಸಮದ್ ಪೊಕೋಟೂರು ಮಾಡಲಿದ್ದಾರೆ. ಸಮಾರೋಪ ಕೂಟ ಪ್ರಾರ್ಥನೆಗೆ ಶೈಖುನಾ ಮಾಣಿಯೂರ್ ಉಸ್ತಾದ್ ನೇತೃತ್ವ ವಹಿಸಲಿದ್ದಾರೆ ಎಂದು ದ.ಕ ಜಿಲ್ಲಾ ಅಝ್ಹರೀಸ್ ಅಸೋಶಿಯೇಷನ್ ಅಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News