ನ.16-17: ದ.ಕ., ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲೆಗಳ ಸಂಘದಿಂದ ರಿಫ್ರೆಶರ್ ಕೋರ್ಸ್

Update: 2018-10-19 17:50 GMT

ಮಂಗಳೂರು, ಅ.19: ಒಂಬತ್ತು ಮತ್ತು 10ನೇ ತರಗತಿಯ ವಿಜ್ಞಾನ ಮತ್ತು ಗಣಿತ ಪಠ್ಯಕ್ರಮದಲ್ಲಿ ಬದಲಾವಣೆಗಳಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲೆಗಳ ಸಂಘ ಈ ವಿಷಯಗಳಲ್ಲಿ ರಿಫ್ರೆಶರ್ ಕೋರ್ಸ್‌ಗಳನ್ನು ಆಯೋಜಿಸಿದೆ.

ನ. 16 ಮತ್ತು 17ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಗರದ ಬಲ್ಮಠದಲ್ಲಿರುವ ಸಹೋದಯ ಹಾಲ್‌ನಲ್ಲಿ ಕಾರ್ಯಾಗಾರ ನಡೆಯಲಿದೆ.

ಕಾರ್ಯಾಗಾರದಲ್ಲಿ ಪ್ರತಿಷ್ಠಿತ ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು. ಆಸಕ್ತ ಶಾಲೆಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಲು ಪ್ರವೇಶ ಪತ್ರವನ್ನು ತುಂಬಿಸಿ ಮುಂದಿನ ವಾರದೊಳಗೆ ಕಳುಹಿಸಬೇಕು.

ಒಬ್ಬ ಅಭ್ಯರ್ಥಿಗೆ ಒಂದು ದಿನದ ಶುಲ್ಕ 250 ರೂ. ಆಗಿರುತ್ತದೆ. ಆಸಕ್ತ ಶಾಲೆಗಳು ತಮ್ಮ ಡಿ.ಡಿ. ಅಥವಾ ಚೆಕ್‌ನ್ನು ಡಿ.ಕೆ. ಆ್ಯಂಡ್ ಉಡುಪಿ ಡಿಸ್ಟ್ರಿಕ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ಸ್ ಅಸೋಸಿಯೇಶನ್ (ರಿ) ಇದರ ಹೆಸರಲ್ಲಿ ರವೀಂದ್ರ ಶೆಟ್ಟಿ, ಕಾರ್ಯದರ್ಶಿ, ದ.ಕ. ಮತ್ತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲೆಗಳ ಸಂಘ, ಕೆ/ಆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ, ದೇರಳಕಟ್ಟೆ, ಮಂಗಳೂರು, ದ.ಕ. ಜಿಲ್ಲೆ ಇಲ್ಲಿಗೆ ಕಳುಹಿಸಬೇಕು.

ನಿಮಗೆ ಪ್ರವೇಶಪತ್ರ ತಲುಪದೇ ಇದ್ದಲ್ಲಿ, ನಿಮ್ಮ ಶಾಲೆಯ ಹೆಸರು, ಅಭ್ಯರ್ಥಿಯ ಹೆಸರು, ವಿಷಯ, ಡಿ.ಡಿ. ಅಥವಾ ಚೆಕ್, ಶಾಲೆಯ ದೂರವಾಣಿ ಸಂಖ್ಯೆ ಮತ್ತು ಶಿಕ್ಷಕರ ಮೊಬೈಲ್ ಸಂಖ್ಯೆಯನ್ನು ಬರೆದು ಮೇಲಿನ ವಿಳಾಸಕ್ಕೆ ಕಳುಹಿಸಬಹುದು. ಕಾರ್ಯಾಗಾರದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಭೋಜನ ಮತ್ತು ಸಂಜೆಯ ಕಾಫಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಘದ ಅಧ್ಯಕ್ಷ ಮುಹಮ್ಮದ್ ಬ್ಯಾರಿ (ಮೊ.9880314522), ಕಾರ್ಯದರ್ಶಿ ಕೆ.ರವೀಂದ್ರ ಶೆಟ್ಟಿ (ಮೊ. 9448254262), ಖಜಾಂಚಿ ಸವಣೂರು ಸೀತಾರಾಮ ರೈ (ಮೊ.9448136875), ಜೊತೆ ಕಾರ್ಯದರ್ಶಿ ಜಯಸೂರ್ಯ ರೈ (ಮೊ.9480200171) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News