ಶಾಸಕ ಪಿ.ಬಿ.ಅಬ್ದುರ್ರಝಾಕ್ ನಿಧನಕ್ಕೆ ಸಂತಾಪ

Update: 2018-10-20 05:05 GMT

ಮಂಗಳೂರು, ಅ.20: ಮಂಜೇಶ್ವರ ಶಾಸಕ, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ನ ರಾಷ್ಟ್ರೀಯ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ಬಿ.ಅಬ್ದುರ್ರಝಾಕ್ ನಿಧನಕ್ಕೆ ಎಂಎಸ್‌ಎಫ್ ತೀವ್ರ ಸಂತಾಪ ಸೂಚಿಸಿದೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ಗುರುತಿಸಿಕೊಂಡಿದ್ದ ರಝಾಕ್ ಅವರು ಕ್ಷೇತ್ರದ ಜನತೆಯೊಂದಿಗೆ ಸದಾ ಬೆರೆತು ಅವರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದರು. ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಸುನ್ನಿ ಮಹಲ್ ಫೆಡರೇಶನ್‌ನ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸಂಯುಕ್ತ ಜಮಾಅತ್‌ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಡಿನಾಡ ಕನ್ನಡಿಗರ ಪರ ಧ್ವನಿಯೆತ್ತಿದ್ದ ರಝಾಕ್ ಅವರು ಕರ್ನಾಟಕದ ಜನತೆಯ ಮನಗೆದ್ದ ನಾಯಕರೂ ಆಗಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಮುಸ್ಲಿಂ ಲೀಗ್ ದ.ಕ. ಜಿಲ್ಲಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಯು. ಇಸ್ಮಾಯೀಲ್ ಬಿ.ಸಿ.ರೋಡ್, ಕೋಶಾಧಿಕಾರಿ ತಬೂಕು ದಾರಿಮಿ, ಮುಸ್ಲಿಮ್ ಯೂತ್ ಲೀಗ್ ಜಿಲ್ಲಾಧ್ಯಕ್ಷ ಸಿದ್ದೀಕ್ ತಲಪಾಡಿ, ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮದ್ ಸಾಲೆತ್ತೂರು, ಕಾರ್ಯದರ್ಶಿ ಫಯಾಝ್ ಬಿ.ಕೆ. ಜೋಕಟ್ಟೆ , ಎಂಎಸ್‌ಎಫ್ ರಾಷ್ಟ್ರೀಯ ಕೋಶಾಧಿಕಾರಿ ನೌಶಾದ್ ಮಲಾರ್, ಎಂಎಸ್‌ಎಫ್ ರಾಜ್ಯಾಧ್ಯಕ್ಷ ಅಡ್ವಕೇಟ್ ಜಲೀಲ್ ನಂದಾವರ, ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಬಾತಿಷಾ ಕೊಡಗು, ಕಾರ್ಯದರ್ಶಿಗಳಾದ ಮುನಾಝ್ ತೋಡಾರು, ಕೆ.ಟಿ.ಆರ್.ನವಾಝ್ ಕಟ್ಟತ್ತಾರು, ಫಾಝಿಲ್ ಪೇರಿಮಾರ್, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಅಕ್ಮಲ್ ಬಾಷ , ಎಂಎಸ್‌ಎಫ್ ದ.ಕ. ಜಿಲ್ಲಾಧ್ಯಕ್ಷ ಇಶ್ರಾರ್ ಗೂಡಿನಬಳಿ, ಪ್ರಧಾನ ಕಾರ್ಯದರ್ಶಿ ಶಾರೂಕ್ ಪರ್ಲಿಯಾ, ಕೋಶಾಧಿಕಾರಿ ಇಮ್ತಿಯಾಝ್ ಜೋಕಟ್ಟೆ, ಕಾಮಿಲ್ ಜೋಕಟ್ಟೆ, ನಿಸಾರ್ ಅಹ್ಮದ್ ಬೆಂಗ್ರೆ, ಶಾದೀನ್ ಕುಕ್ಕಾಜೆ, ಅನೀಸ್ ಸೂರಿಂಜೆ, ದಾವೂದ್ ಹಕೀಂ ಜೋಕಟ್ಟೆ, ಸಿದ್ದೀಕ್ ಮುನೀರ್ ಆತೂರು, ಫಯಾಝ್ ಅಡ್ಡೂರು, ಮುನವ್ವರ್ ಅಡ್ಡೂರು, ಸಫ್ವಾನ್ ಕಣ್ಣೂರು ಹಾಗೂ ಎಂಎಸ್‌ಎಫ್ ಕ್ಷೇತ್ರ ಸಮಿತಿ, ಗ್ರಾಮ ಸಮಿತಿಯ ನಾಯಕರು ಸಂತಾಪ ಸೂಚಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News