ಶಾಸಕ ಅಬ್ದುರ್ರಝಾಕ್‌ರ ಕಾರಿನ ನಂಬರ್ ಹಿಂದಿದೆ ಕುತೂಹಲಕಾರಿ ವಿಚಾರ!

Update: 2018-10-20 06:30 GMT

ಕಾಸರಗೋಡು, ಅ.20: ಕೇರಳ ವಿಧಾನಸಭೆಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಫಲಿತಾಂಶ ರಾಷ್ಟ್ರ ರಾಜಕಾರಣದ ಗಮನಸೆಳೆದಿತ್ತು. ಕೊನೆಯ ಮತಗಟ್ಟೆ ತನಕದ ಎಣಿಕೆ ಮುಗಿಯುವರೆಗೂ ಎಲ್ಲರೂ ಮಂಜೇಶ್ವರವನ್ನು ಕುತೂಹಲದಿಂದ ನೋಡುವಂತಾಗಿತ್ತು. ಆದರೆ ಅಂತಿಮ ಫಲಿತಾಂಶ ಹೊರಬಿದ್ದಾಗ ಪಿ.ಬಿ.ಅಬ್ದುರ್ರಝಾಕ್ 89 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಈ ರೋಚಕ ಗೆಲುವಿನ ಈ ಅಂತರವನ್ನು ತನ್ನ ಕಾರಿನ ನೋಂದಣಿ ಸಂಖ್ಯೆಯಾಗಿಸುವ ಮೂಲಕ ರಝಾಕ್ ಗಮನ ಸೆಳೆದಿದ್ದರು.

ಚುನಾವಣೆಯಲ್ಲಿ ಪಿ.ಬಿ.ಅಬ್ದುರ್ರಝಾಕ್ 56,870 ಮತಗಳನ್ನು ಗಳಿಸಿದ್ದರೆ, ಅವರಿಗೆ ಪ್ರಬಲ ಸ್ಪರ್ಧೆಯೊಡ್ಡಿದ್ದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ 56,781 ಮತಗಳನ್ನು ಗಳಿಸಿದ್ದರು. ಈ ಹಿಂದಿನ ಚುನಾವಣೆಗಳಲ್ಲೂ ಮಂಜೇಶ್ವರದಲ್ಲಿ ಒಂದಿಷ್ಟು ನಿರೀಕ್ಷೆಯೊಂದಿಗೆ ಸ್ಪರ್ಧಿಸುತ್ತಿದ್ದ ಬಿಜೆಪಿಗೆ 2016ರಲ್ಲಿ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತ್ತು. ಆದರೆ ಅಂತಿಮವಾಗಿ ಅದೃಷ್ಟ ಮಾತ್ರ ಪಿ.ಬಿ.ಅಬ್ದುರ್ರಝಾಕ್ ಅವರದ್ದಾಗಿತ್ತು. ಈ ರೋಚಕ ಗೆಲುವಿನ ಅಂತರದ ಸಂಖ್ಯೆಯನ್ನೇ ತನ್ನ ಕಾರಿನ ನಂಬ್ರವಾಗಿಸುವ ಮೂಲಕ ಶಾಸಕರು ಗಮನ ಸೆಳೆದಿದ್ದಾರೆ.

ಆದರೆ ಈ ಚುನಾವಣೆಯಲ್ಲಿ ನಕಲಿ ಮತದಾನವಾಗಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಹೈಕೋರ್ಟ್ ಮೆಟ್ಟಲೇರಿದ್ದು, ಕಾನೂನು ಹೋರಾಟ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News