ಶಾಸಕರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದ ಅಬ್ದುರ್ರಝಾಕ್

Update: 2018-10-20 07:43 GMT

ಕಾಸರಗೋಡು, ಅ.20: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಕೇರಳ ವಿಧಾನಸಭೆ ಪ್ರವೇಶಿಸಿದ್ದ ಪಿ.ಬಿ.ಅಬ್ದುರ್ರಝಾಕ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನಸೆಳೆದಿದ್ದರು.

2011ರಲ್ಲಿ ಮೊದಲ ಬಾರಿ ಶಾಸಕರಾದ ಅಬ್ದುರ್ರಝಾಕ್ ಅವರು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಡಿನಾಡ ಕನ್ನಡಿಗರ ಪರ ಧ್ವನಿಯೆತ್ತಿದ್ದರು. ಆ ಮೂಲಕ ದಿವಂಗತ ಚೆರ್ಕಳಂ ಅಬ್ದುಲ್ಲಾರ ಬಳಿಕ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೆಗ್ಗಳಿಕೆ ರಝಾಕ್ ಅವರದ್ದು. ಚೆರ್ಕಳಂ ಅವರು 2001ರಲ್ಲಿ ಸಚಿವರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

2016ರಲ್ಲಿ ಎರಡನೇ ಬಾರಿ ಶಾಸಕರಾದ ಪಿ.ಬಿ.ಅಬ್ದುರ್ರಝಾಕ್ ಮತ್ತೆ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದರು. ಗಡಿನಾಡಿನ ಕನ್ನಡಿಗರ ಪರ ಹಲವು ಸದನದಲ್ಲಿ ಧ್ವನಿಯೆತ್ತಿದ್ದ ಪಿ.ಬಿ.ಅಬ್ದುರ್ರಝಾಕ್ ಕನ್ನಡದ ಪರ ಅಪಾರ ಕಾಳಜಿ ಹೊಂದಿದ್ದರು. ಅವರು ಕನ್ನಡಪರ ಕಾರ್ಯಕ್ರಮಗಳಲ್ಲಿ ತಪ್ಪದೇ ಹಾಜರಾಗುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News